‘ಟಾಕ್ಸಿಕ್’ಗೂ ಮುನ್ನ: ಪ್ರತಿಯೊಬ್ಬ ಅಭಿಮಾನಿಯೂ ನೋಡಲೇಬೇಕಾದ ಯಶ್ ಅಭಿನಯದ 7 ಹಿಟ್ ಸಿನಿಮಾಗಳು
ಬೆಂಗಳೂರು: ರಾಕಿಂಗ್ ಸ್ಟಾರ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಕನ್ನಡದಲ್ಲಿ ಚಾಕ್ಲೇಟ್ ಬಾಯ್ಸ ಆಗಿ ಲವ್ ಸ್ಟೋರಿ ಸಿನಿಮಾಗಳನ್ನು ಪ್ರೇಕ್ಷಕರ ಮನಗೆಲ್ಲುತ್ತಿದ್ದ ʼರಾಜಾಹುಲಿʼ, ʼಕೆಜಿಎಫ್ʼನಿಂದ ಮಾಸ್ ಪಾತ್ರಕ್ಕೂ ತಾನು ಸೈ ಎಂದು ತನ್ನತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ನಟ. ಯಶ್ ವೃತ್ತಿ ಬದುಕು ಉತ್ತುಂಗದಲ್ಲಿದೆ. ʼಟಾಕ್ಸಿಕ್ʼ ಅವರ ಪಯಣಕ್ಕೆ ದೊಡ್ಡ ತಿರುವು ನೀಡಲಿದೆ. ಆ ಬಳಿಕ ʼರಾಮಾಯಣʼ ಅವರನ್ನು ಗ್ಲೋಬಲ್ ಮಟ್ಟದಲ್ಲಿ ಖ್ಯಾತಿಯನ್ನು ತರಲಿದೆ. ಒಂದು ಕಾಲದಲ್ಲಿ ತನ್ನ ಸಿನಿಮಾವನ್ನು ನೋಡಬೇಕೆಂದು ಬಸ್ ಹತ್ತಿ ಪಾಂಪ್ಲೆಟ್ (Pamphlet) ಹಚ್ಚುತ್ತಿದ್ದರು ಯಶ್. ಇಂದು ತಾವು ವೇದಿಕೆ ಹತ್ತಿ ಮಾತನಾಡಿದರೆ ಲಕ್ಷಾಂತರ ಮಂದಿಯ ಚಪ್ಪಾಳೆ, ಪ್ರೀತಿ , ಪ್ರೋತ್ಸಾಹವನ್ನು ಪಡೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ʼಟಾಕ್ಸಿಕ್ʼ ಯಶ್ ಅವರನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕರು ಗಮನ ಸೆಳೆಯುವಂತೆ ಮಾಡಿದೆ.
ಕನ್ನಡದಲ್ಲಿ ಯಶ್ ʼಟಾಕ್ಸಿಕ್ʼಗೂ ಮೊದಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮನಗೆದ್ದವರು. ಯಶ್ ಅವರ ಪ್ಯಾನ್-ಇಂಡಿಯಾ ಸ್ಟಾರ್‌ಡಮ್‌ನ ಯಶಸ್ಸಿನ ಹಿಂದೆ ಹಲವು ವರ್ಷಗಳ ಕನ್ನಡ ಸಿನಿಮಾಗಳ ಕೊಡುಗೆಯಿದೆ. ‘ರಾಕಿ ಭಾಯ್’ ಪಾತ್ರದ ಮೂಲಕ ಇಡೀ ಭಾರತದಲ್ಲೇ ಮನೆಮಾತಾಗುವ ಮುನ್ನ, ಅವರು ತಮ್ಮ ಪ್ರೇಮಕಥೆ, ಹಾಸ್ಯ ಹಾಗೂ ಆಕ್ಷನ್ ಶೈಲಿಯ ಕಮರ್ಷಿಯಲ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. 'ಗೂಗ್ಲಿ', 'ರಾಜಾ ಹುಲಿ' ಮತ್ತು 'ಮಿಷ್ಟರ್ ಅಂಡ್ ಮಿಸೆಸ್ ರಾಮಾಚಾರಿ'ಯಂತಹ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಯಶ್ ಅವರ ಸ್ಥಾನವನ್ನು ಗಟ್ಟಿಮಾಡಿದವು. 'ಟಾಕ್ಸಿಕ್' ವೀಕ್ಷಿಸುವ ಮುನ್ನ ಪ್ರತಿಯೊಬ್ಬ ಅಭಿಮಾನಿಯೂ ನೋಡಲೇಬೇಕಾದ ಯಶ್ ಅವರ 7 ಪ್ರಮುಖ ಚಿತ್ರಗಳು ಇಲ್ಲಿವೆ: ರಾಜಾ ಹುಲಿ (2013) 2013ರ ಉತ್ತರಾರ್ಧದಲ್ಲಿ ತೆರೆಕಂಡ 'ರಾಜಾ ಹುಲಿ' ಗಲ್ಲಾಪೆಟ್ಟಿಗೆಯಲ್ಲಿ ಯಶ್ ಅವರ ಯಶಸ್ಸಿನ ಪಯಣವನ್ನು ಮುಂದುವರಿಸಿತು. ಈ ಕಾಮಿಡಿ-ಡ್ರಾಮಾ ಚಿತ್ರದಲ್ಲಿ ಯಶ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದು, ಸ್ನೇಹ, ಸೌಹಾರ್ದತೆ ಮತ್ತು ಕೌಟುಂಬಿಕ ಭಾವನೆಗಳ ಸಮ್ಮಿಶ್ರಣದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.