Select Location
All Locations
State
Region
City / District
ಶಬರಿಮಲೆಯಲ್ಲೂ ತುಪ್ಪ ಹಗರಣ! ಟೆಂಡರ್‌ ನಿಯಮ ಉಲ್ಲಂಘಿಸಿ ಹೆಚ್ಚಿನ ದರಕ್ಕೆ ತುಪ್ಪ ಖರೀದಿ ಆರೋಪ

ಶಬರಿಮಲೆಯಲ್ಲೂ ತುಪ್ಪ ಹಗರಣ! ಟೆಂಡರ್‌ ನಿಯಮ ಉಲ್ಲಂಘಿಸಿ ಹೆಚ್ಚಿನ ದರಕ್ಕೆ ತುಪ್ಪ ಖರೀದಿ ಆರೋಪ

ತಿರುವನಂತಪುರ: ತಿರುಮಲ ತಿರುಪತಿಯ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ ಎಂಬ ಪ್ರಕರಣದ ರೀತಿಯಲ್ಲೇ ಈಗ ಮತ್ತೊಂದು ಪ್ರಸಿದ್ಧ ದೇವಾಲಯ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲೂ ತುಪ್ಪದ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 2025-26ರ ಮಂಡಲ ಮಕರವಿಳಕ್ಕು ಋತುವಿನಲ್ಲಿ ದೇಗುಲಕ್ಕೆ ಕೇರಳದ ಸರಕಾರಿ ಹಾಲು ಸಹಕಾರ ಸಂಸ್ಥೆಯಾದ ಮಿಲ್ಮಾದಿಂದ ತುಪ್ಪ ಸರಬರಾಜು ಮಾಡಲಾಗಿದ್ದು, ಈ ವಿತರಣೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ವಿಚಕ್ಷಣ ದಳದಿಂದ ತನಿಖೆ ನಡೆಸುವಂತೆ ಆದೇಶಿಸಿದೆ.

ತಮಿಳುನಾಡಿನ ಸಂಸ್ಥೆಯೊಂದು ಕೆ.ಜಿ.ಗೆ 375 ರೂ.ನಂತೆ ತುಪ್ಪ ನೀಡಲು ಪ್ರಸ್ತಾವ ಸಲ್ಲಿಸಿದ್ದರೂ 515 ರೂ. ನೀಡಿ ಮಿಲ್ಮಾದಿಂದಲೇ ತುಪ್ಪ ಖರೀ ದಿಸಲಾಗಿದೆ ಇದರಿಂದ ದೇವಸ್ವಂ ಮಂಡಳಿಗೆ 3 ಕೋ. ರೂ. ನಷ್ಟವಾಗಿದೆ ಎಂದೂ ಆರೋಪಿಸಲಾಗಿತ್ತು. ಈ ವರದಿ ಬೆನ್ನಲ್ಲೇ ಸ್ವಯಂ ಪ್ರಕರಣ ವನ್ನು ದಾಖಲಿಸಿಕೊಂಡ ಕೇರಳ ಹೈಕೋರ್ಟ್‌, ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಸೂಚಿಸಿದೆ. ಇತ್ತ ಮಿಲ್ಮಾ ಸಂಸ್ಥೆ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದು, ನಮ್ಮಿಂದ ಪೂರೈಕೆಯಾದ ತುಪ್ಪದಲ್ಲಿ ಯಾವುದೇ ದೋಷವಿರಲಿಲ್ಲ ಎಂದು ತಿಳಿಸಿದೆ.


Udayavani 19 days ago
Home Flash News