Select Location
All Locations
State
Region
City / District
ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ: ಕಾವೇರಿ ಒಡಲು ಖಾಲಿ, ಕೃಷ್ಣಾ ಕೊಳ್ಳದಲ್ಲೂ ಆತಂಕ, ಬರಿದಾಗುತ್ತಿವೆ ಪ್ರಮುಖ ಜಲಾಶಯಗಳು

ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ: ಕಾವೇರಿ ಒಡಲು ಖಾಲಿ, ಕೃಷ್ಣಾ ಕೊಳ್ಳದಲ್ಲೂ ಆತಂಕ, ಬರಿದಾಗುತ್ತಿವೆ ಪ್ರಮುಖ ಜಲಾಶಯಗಳು

ಬೆಂಗಳೂರು, ಜೂನ್ 13: ರಾಜ್ಯಕ್ಕೆ ಮುಂಗಾರು ಮಳೆಯ (Monsoon Rain) ಆಗಮನವಾಗಿದ್ದರೂ ಕಾವೇರಿ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಕಾವೇರಿ ಕೊಳ್ಳದ ಜೀವನಾಡಿಗಳಾದ ಕೆಆರ್​ಎಸ್, ಕಬಿನಿ, ಹೇಮಾವತಿ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಲಾಶಯವಾದ ಆಲಮಟ್ಟಿಯಲ್ಲೂ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಜೂನ್ ಎರಡನೇ ವಾರ ಕಳೆದರೂ ಸಮರ್ಪಕ ಮಳೆಯಾಗದ ಕಾರಣ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭೀತಿ ಎದುರಾಗಿದ್ದು, ರೈತ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಸದ್ಯ 81.36 ಅಡಿಗೆ (ಗರಿಷ್ಠ 124.80 ಅಡಿ) ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 108.64 ಅಡಿ ನೀರಿದ್ದು, ಜೂನ್‌ನಲ್ಲೇ ಬಾಗಿನ ಅರ್ಪಿಸಲಾಗಿತ್ತು. ಸದ್ಯ ಡ್ಯಾಂನಲ್ಲಿರುವ 11.399 ಟಿಎಂಸಿ ನೀರಿನಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಸಿಗುವುದು ಕೇವಲ 6 ಟಿಎಂಸಿ ಮಾತ್ರ! ಸದ್ಯ ಒಳಹರಿವು ಕೇವಲ 581 ಕ್ಯೂಸೆಕ್ ಇದೆ. ಕಳೆದ ವರ್ಷ ತಮಿಳುನಾಡಿಗೆ ಹೆಚ್ಚುವರಿಯಾಗಿ 30 ಟಿಎಂಸಿ ನೀರು ಹರಿಸಲಾಗಿತ್ತು, ಆದರೆ ಈ ಬಾರಿ ನಿಗದಿತ 9 ಟಿಎಂಸಿ ನೀರು ಕೊಡುವುದೂ ಅಸಾಧ್ಯವಾಗಿದೆ.


TV9 Kannada 1 hour ago
Home Flash News