ಮುಕೇಶ್ ಅಂಬಾನಿ ಸಂಬಳವನ್ನೇ ಪಡೆದಿಲ್ಲ, ಆದ್ರೂ ಅವರ ಆದಾಯ ಎಷ್ಟು ಗೊತ್ತಾ?
ಮುಂಬೈ: ದೇಶ ಮತ್ತು ವಿದೇಶಿ ದಿಗ್ದಜ ಉದ್ಯಮಿಗಳಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ದಿಢೀರ್ ಅಂತಾ 49 ಕೋಟಿ ಡಾಲರ್‌ಗಳ ಕುಸಿತವಾಗಿದೆ. ಇದರಿಂದಾಗಿ ಮುಕೇಶ್ ಅಂಬಾನಿ, ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕು ಸ್ಥಾನ ಕುಸಿದಿದ್ದಾರೆ. ಮುಕೇಶ್ ಅಂಬಾನಿ ಏಷ್ಯಾದಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವರ್ಷ ಅವರ ನಿವ್ವಳ ಮೌಲ್ಯದಲ್ಲಿ 20.8 ಬಿಲಿಯನ್ ಡಾಲರ್‌ಗಳ ಕುಸಿತವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ವರದಿಯ ಪ್ರಕಾರ, ಆರ್ಥಿಕ ವರ್ಷ 2005-26ರಲ್ಲಿ ಮುಕೇಶ್ ಅಂಬಾನಿ/ವರು ಯಾವುದೇ ಸಂಬಳ, ಭತ್ಯೆ, ಸ್ಟಾಕ್ ಆಪ್ಷನ್ ಅಥವಾ ನಿವೃತ್ತಿ ಪ್ರಯೋಜನಗಳನ್ನು ಪಡೆದಿಲ್ಲ. 2020ರ ಕೋವಿಡ್ ಸಮಯದಲ್ಲಿ ಸಂಬಳ ಪಡೆಯದಿರಲು ನಿರ್ಧಾರ ತೆಗೆದುಕೊಂಡರು, ಅಂದಿನಿಂದ ಇಲ್ಲಿವರೆಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2008-09ರಲ್ಲಿ ಅವರ ವಾರ್ಷಿಕ ಸಂಬಳ 15 ಕೋಟಿ ರೂಪಾಯಿಗಳಾಗಿತ್ತು, ಆ ಸಂಬಳದ ಮೊತ್ತವನ್ನು ಅವರು ಸುಮಾರು 12 ವರ್ಷಗಳ ಕಾಲ ಹೆಚ್ಚಿಸಲಿಲ್ಲ. ಇದು ಪಕ್ಕಾ ಬಿಸಿನೆಸ್ ಮ್ಯಾನ್ ಲಕ್ಷಣವೂ ಆಗಿದೆ. ಮುಕೇಶ್ ಅಂಬಾನಿ ಆದಾಯದ ಮೂಲಗಳು: ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಯಾವುದೇ ಸಂಬಳ ಪಡೆಯುತ್ತಿಲ್ಲ, ಆದರೆ ಅವರ ಆದಾಯದ ಪ್ರಮುಖ ಮೂಲ ಕಂಪನಿಯಲ್ಲಿನ ಅವರ ಪಾಲು.
ರಿಲಿಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅಂಬಾನಿ ಕುಟುಂಬದ ಸುಮಾರು 50%ಕ್ಕಿಂತ ಹೆಚ್ಚು ಪಾಲು ಇದೆ. ಕಂಪನಿಯ ವ್ಯವಹಾರ ಹೆಚ್ಚಾದಾಗ, ಷೇರುಗಳ ಬೆಲೆ ಏರುತ್ತದೆ, ಇದರಿಂದ ಅವರ ಸಂಪತ್ತು ಹೆಚ್ಚಾಗುತ್ತದೆ. ಡಿವಿಡೆಂಡ್‌ಗಳಿಂದ ಆದಾಯ: ಆರ್ಥಿಕ ವರ್ಷ 2025-26ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರತಿ ಷೇರಿಗೆ 6 ರೂಪಾಯಿಗಳ ಡಿವಿಡೆಂಡ್ ಘೋಷಿಸಿದೆ. ಮುಕೇಶ್ ಅಂಬಾನಿ ವೈಯಕ್ತಿಕವಾಗಿ ಸುಮಾರು 1.61 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಇದರಿಂದ ಅವರಿಗೆ 9.66 ಕೋಟಿ ರೂಪಾಯಿಗಳ ಡಿವಿಡೆಂಡ್ ಸಿಕ್ಕಿದೆ. ಅಂಬಾನಿ ಕುಟುಂಬ ಮತ್ತು ಅಸೋಸಿಯೇಟ್ ಕಂಪನಿಗಳಿಗೆ ಸುಮಾರು 3,987 ಕೋಟಿ ರೂಪಾಯಿಗಳ ಡಿವಿಡೆಂಡ್ ಸಿಕ್ಕಿದೆ. ಒಟ್ಟಾರೆಯಾಗಿ, ಈ ವರ್ಷ ರಿಲಯನ್ಸ್‌ನಿಂದ ಅಂಬಾನಿ ಕುಟುಂಬಕ್ಕೆ ಸುಮಾರು 3,996 ಕೋಟಿ ರೂಪಾಯಿಗಳ ಲಾಭವಾಗಿದೆ.