Select Location
All Locations
State
Region
City / District
ನಾಯಕರದ್ದೇ ಅಬ್ಬರ: ಟಾಪ್-5 ‘ಸೂಪರ್ ಸ್ಟ್ರೈಕರ್ಸ್’ ಪಾಟೀದಾರ್ No.1

ನಾಯಕರದ್ದೇ ಅಬ್ಬರ: ಟಾಪ್-5 ‘ಸೂಪರ್ ಸ್ಟ್ರೈಕರ್ಸ್’ ಪಾಟೀದಾರ್ No.1

ಟಿ20 ಕ್ರಿಕೆಟ್‌ನಲ್ಲಿ ರನ್ ಬಾರಿಸುವುದಷ್ಟೇ ಮುಖ್ಯವಲ್ಲ, ಎಷ್ಟು ವೇಗವಾಗಿ ರನ್ ಗಳಿಸುತ್ತಾರೆ ಎಂಬುದು ಮ್ಯಾಚ್ ವಿನ್ನಿಂಗ್ ಫ್ಯಾಕ್ಟರ್ ಆಗಿರುತ್ತದೆ. ಪ್ರಸಕ್ತ ಐಪಿಎಲ್ ಸೀಸನ್-19ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಂಡದ ದಿಕ್ಕನ್ನೇ ಬದಲಿಸುವ 'ಸೂಪರ್ ಸ್ಟ್ರೈಕರ್ಸ್' ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿಶೇಷವೆಂದರೆ ಈ ಬಾರಿ ಟಾಪ್-5 ಸ್ಟ್ರೈಕ್‌ರೇಟ್ ಹೊಂದಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿವಿಧ ತಂಡಗಳ ನಾಯಕರೇ ಸ್ಥಾನ ಪಡೆದಿದ್ದಾರೆ.

1. ರಜತ್ ಪಟಿದಾರ್ (ಆರ್​​ಸಿಬಿ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ ಪಟಿದಾರ್ ಬರೋಬ್ಬರಿ 213ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಎದುರಾಳಿ ಬೌಲರ್‌ಗಳನ್ನು ಕಂಗಾಲು ಮಾಡಿದ್ದಾರೆ.

2. ಇಶಾನ್ ಕಿಶನ್ (ಎಸ್​​ಆರ್​​ಹೆಚ್) ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ಸಾರಥಿ ಇಶಾನ್ ಕಿಶನ್ ಎರಡನೇ ಸ್ಥಾನದಲ್ಲಿದ್ದಾರೆ. ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ 188.49 ಸ್ಟ್ರೈಕ್‌ರೇಟ್ ಹೊಂದಿದ್ದು, ತಂಡಕ್ಕೆ ಆಕ್ರಮಣಕಾರಿ ಆರಂಭ ನೀಡುತ್ತಿದ್ದಾರೆ.

3. ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್) ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್, ಬೆಸ್ಟ್ ಕ್ಯಾಪ್ಟನ್ ಎನಿಸಿಕೊಳ್ಳುವುದರ ಜೊತೆಗೆ ಬೆಸ್ಟ್ ಸ್ಟ್ರೈಕರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ 208 ರನ್ ಗಳಿಸಿರುವ ಅಯ್ಯರ್, 182.45 ಸ್ಟ್ರೈಕ್‌ರೇಟ್ ಕಾಯ್ದುಕೊಂಡು ಮೂರನೇ ಸ್ಥಾನದಲ್ಲಿದ್ದಾರೆ.

4. ಶುಭ್ಮನ್ ಗಿಲ್ (ಗುಜರಾತ್ ಟೈಟನ್ಸ್) ಯಂಗ್ ಅಂಡ್ ಡೈನಾಮಿಕ್ ನಾಯಕ ಶುಭ್ಮನ್ ಗಿಲ್ ಈ ಬಾರಿ ರನ್ ಬೇಟೆಯಲ್ಲಿ ಯಾರಿಗೂ ಕಮ್ಮಿ ಇಲ್ಲ. ಆವೃತ್ತಿಯಲ್ಲಿ ಈಗಾಗಲೇ 265 ರನ್ ಚಚ್ಚಿರುವ ಗಿಲ್, 151.45 ಸ್ಟ್ರೈಕ್‌ರೇಟ್ ಮೂಲಕ ನಾಲ್ಕನೇ ಅತ್ಯುತ್ತಮ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದಾರೆ.

5. ಅಜಿಂಕ್ಯಾ ರಹಾನೆ (ಕೆಕೆಆರ್) ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯಾ ರಹಾನೆ ತಮ್ಮ ಅನುಭವದ ಜೊತೆಗೆ ಟಿ20 ಶೈಲಿಯ ಅಬ್ಬರವನ್ನು ಮೈಗೂಡಿಸಿಕೊಂಡಿದ್ದಾರೆ. ಕೆಕೆಆರ್ ಪಂದ್ಯಗಳಲ್ಲಿ ಸೋಲುತ್ತಿದ್ದರೂ, ರಹಾನೆ ಅವರ ವೈಯಕ್ತಿಕ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿದೆ. 145ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಅವರು ಟಾಪ್-5 ಲಿಸ್ಟ್ ಸೇರಿದ್ದಾರೆ.

ಒಟ್ಟಾರೆಯಾಗಿ, ಈ ಸೂಪರ್ ಸ್ಟ್ರೈಕರ್ ನಾಯಕರು ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲದೆ, ತಮ್ಮ ವೇಗದ ಆಟದ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುತ್ತಿದ್ದಾರೆ. ಶರವೇಗದಲ್ಲಿ ರನ್ ಗಳಿಸುವ ಈ ಆಟಗಾರರೇ ಈ ಬಾರಿಯ ಐಪಿಎಲ್‌ನ ರಿಯಲ್ ಗೇಮ್ ಚೇಂಜರ್ಸ್ ಎನಿಸಿಕೊಂಡಿದ್ದಾರೆ.


News First 1 hour ago
Home Flash News