Davangere By Election: ಸಿಎಂ-ಡಿಸಿಎಂ ಉಪಸ್ಥಿತಿಯಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ; ಬಂಡಾಯದ ಬಗ್ಗೆ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ
ಸಾವಿರಾರು ಕಾರ್ಯಕರ್ತರ ಜೊತೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮೆರವಣಿಗೆ ಮೂಲಕ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಮರ್ಥ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದ್ರ. ಬದಲಾಯಿಸಿ
ಕನ್ನಡ
ರಾಜ್ಯ
ಸಿನಿಮಾ
ಲೈಫ್ ಸ್ಟೈಲ್
ದೇಶ ವಿದೇಶ
ಬ್ಯುಸಿನೆಸ್
ಧರ್ಮ ಆಧ್ಯಾತ್ಮ ದಾವಣಗೆರೆ.
(ಮಾ.23): ರಾಜ್ಯದಲ್ಲಿ ಬೈ ಎಲೆಕ್ಷನ್ ಅಖಾಡ ರಂಗೇರಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಎಸ್ ಎಸ್ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಾಮನೂರು ಮೊಮ್ಮಗನ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಉಪಸ್ಥಿತರಿದ್ರು. ಸಮರ್ಥ್ ಜೊತೆ ನಿಂತ ಸಿಎಂ, ಡಿಸಿಎಂ ಹಾಗೂ ಎಸ್ಎಸ್ ಮಲ್ಲಿಕಾರ್ಜುನ್ ಅವರು ಒಟ್ಟಿಗೆ ಕೈ ಎತ್ತುವ ಮೂಲಕ ಬಲ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ದಾವಣಗೆರೆಯ ಹೆಚ್ಚಿದ ಬಂಡಾಯದ ಬಿಸಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.