ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಹತ್ಯೆ ಮಾಡಿದ್ದೇವೆ: ಇಸ್ರೇಲ್
ಜೆರುಸಲೆಮ್: ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತಿಬ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕಾಟ್ಜ್, 'ಕಳೆದ ರಾತ್ರಿ ಇರಾನ್ ಖತಿಬ್ ಅನ್ನು ಹತ್ಯೆ ಮಾಡಿದ್ದೇವೆ' ಎಂದು ಪ್ರಕಟಿಸಿದ್ದಾರೆ. ಹಾಗೆಯೇ, ಗುರಿ ವ್ಯಾಪ್ತಿಯಲ್ಲಿರುವ ಇರಾನ್‌ನ ಯಾವುದೇ ಉನ್ನತಾಧಿಕಾರಿಯನ್ನು ಹೊಡೆದುರುಳಿಸುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ. ಇರಾನ್ ಪ್ರಭಾವಿ ನಾಯಕ, ರಕ್ಷಣಾ ವಿಭಾಗದ ಮುಖ್ಯಸ್ಥ ಅಲಿ ಲಾರೀಜಾನಿ ಹಾಗೂ ಅರೆ ಸೇನಾ ಪಡೆ 'ಬಸಿಜ್' ಮುಖ್ಯಸ್ಥ ಗುಲಾಮ್‌ರೇಝಾ ಸೊಲೈಮಾನಿ ಅವರನ್ನು ಸೋಮವಾರ ತಡರಾತ್ರಿ ಹತ್ಯೆಗೈದಿರುವುದಾಗಿ ಇಸ್ರೇಲ್ ನಿನ್ನೆಯಷ್ಟೇ ಪ್ರಕಟಿಸಿತ್ತು. ಅದರ ಬೆನ್ನಲ್ಲೇ, ಖತಿಬ್ ಅವರನ್ನೂ ಕೊಂದಿರುವುದಾಗಿ ಹೇಳಿಕೊಂಡಿದೆ. 'ಇರಾನ್‌ನಲ್ಲಿ ದಾಳಿಯ ತೀವ್ರತೆ ಏರುತ್ತಿದೆ. ನಾವು ನಿರ್ಣಾಯಕ ಹಂತ ತಲುಪಿದ್ದೇವೆ' ಎಂದು ಕಾಟ್ಜ್ ಹೇಳಿದ…