Select Location
All Locations
State
Region
City / District
ʼಡಿಸಿʼ ಚಿತ್ರ ಬ್ಲಾಕ್‌ಬಸ್ಟರ್‌ ಹಿನ್ನೆಲೆ: ನಾಯಕ,ನಿರ್ದೇಶಕ ಸೇರಿ ಮೂವರಿಗೆ BMW ಕಾರು ಗಿಫ್ಟ್

ʼಡಿಸಿʼ ಚಿತ್ರ ಬ್ಲಾಕ್‌ಬಸ್ಟರ್‌ ಹಿನ್ನೆಲೆ: ನಾಯಕ,ನಿರ್ದೇಶಕ ಸೇರಿ ಮೂವರಿಗೆ BMW ಕಾರು ಗಿಫ್ಟ್

ಚೆನ್ನೈ: ಕಾಲಿವುಡ್‌ ನಿರ್ದೇಶಕ ಲೋಕೇಶ್‌ ಕನಕರಾಜ್‌ (Lokesh Kanagaraj) ನಾಯಕ ನಟನಾಗಿ ಕಾಣಿಸಿಕೊಂಡ ʼಡಿಸಿʼ (Dc Movie) ಅಭೂತಪೂರ್ವ ಯಶಸ್ಸಾಗಿದೆ. ಈ ಹಿನ್ನೆಲೆ ನಿರ್ಮಾಪಕರು ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಆಗಸ್ಟ್ 7, 2026 ರಂದು ತೆರೆಕಂಡಿದ್ದ ಈ ಆಕ್ಷನ್ ಕಥಾಹಂದರದ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಾಕ್ಸಾಫೀಸ್‌ನಲ್ಲಿ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಕಂಡಿತ್ತು. ಈ ಹಿನ್ನೆಲೆ ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ಅವರು , ಅರುಣ್ ಮಾಥೇಶ್ವರನ್, ಲೋಕೇಶ್‌ ಕನಕರಾಜ್‌, ಹಾಗೂ ಸಂಗೀತ ಸಂಯೋಜಕ ಅನಿರುದ್ಧ್‌ ರವಿಚಂದರ್ ಅವರಿಗೆ ದುಬಾರಿ ಕಾರುಗಳನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಮೂವರಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಲಾಗಿದೆ. ಇದರ ವಿಡಿಯೋವನ್ನು ಸನ್‌ ಪಿಕ್ಚರ್ಸ್‌ ಹಂಚಿಕೊಂಡಿದೆ.


Udayavani 1 hour ago
Home Flash News