Select Location
All Locations
State
Region
City / District
Dharmasthala Case-Prakash Raj: ಚಿನ್ನಯ್ಯ ಫೋನ್ ಮಾಡಿದ್ದು ನಿಜ ಎಂದ ಪ್ರಕಾಶ್​ ರಾಜ್​, 'ಬುರುಡೆ' ಬಗ್ಗೆ ಹೇಳಿದ್ದು ಇದೊಂದೇ ಮಾತು!

Dharmasthala Case-Prakash Raj: ಚಿನ್ನಯ್ಯ ಫೋನ್ ಮಾಡಿದ್ದು ನಿಜ ಎಂದ ಪ್ರಕಾಶ್​ ರಾಜ್​, 'ಬುರುಡೆ' ಬಗ್ಗೆ ಹೇಳಿದ್ದು ಇದೊಂದೇ ಮಾತು!

ಬೆಂಗಳೂರು (ಜೂ.17): ಧರ್ಮಸ್ಥಳದಲ್ಲಿ (Dharmasthala Case) ಅಕ್ರಮವಾಗಿ ಶವಗಳನ್ನ ಹೂತಿಡಲಾಗಿದೆ ಎನ್ನುವ ಆರೋಪ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಹೀಗಾಗಿ ಸರ್ಕಾರ ಎಸ್​ಐಟಿ (SIT) ರಚನೆ ಮಾಡಿ ತನಿಖೆ ನಡೆಸಿದ್ದು, ಬುರುಡೆ ಹಿಡಿದು ಬಂದ ಚಿನ್ನಯ್ಯನನ್ನೇ ಬಂಧಿಸಿದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ರು. ಈ ವೇಳೆ ಅನೇಕರ ಹೆಸರನ್ನ ಬಾಯ್ಬಿಟ್ಟಿದ್ದ ಚಿನ್ನಯ್ಯ. ಅದರಲ್ಲಿ ನಟ ಪ್ರಕಾಶ್​​ ರಾಜ್ (Prakash Raj)​​ ಜೊತೆ ಕೂಡ ಫೋನ್​​ ಮಾಡಿ ಮಾತಾಡಿದ್ದೆ ಎಂದಿದ್ದ. ಈ ಬಗ್ಗೆ ಸುದ್ದಿ ಹೊರಬೀಳ್ತಿದ್ದಂತೆ, ಸ್ವತಃ ಪ್ರಕಾಶ್​ ರಾಜ್​​ ಅವರೇ ಸುದ್ದಿಗೋಷ್ಠಿ ಕರೆದು, ಧರ್ಮಸ್ಥಳ ಕೇಸ್​​ ಹಾಗೂ ಚಿನ್ನಯ್ಯನ (Chinnaiah) ಜೊತೆಗಿನ ಸಂಪರ್ಕದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಚಿನ್ನಯ್ಯ ಫೋನ್ ಮಾಡಿದಾಗ ಪ್ರಕಾಶ್ ರಾಜ್ ಹೇಳಿದ್ದೇನು?

'ಧರ್ಮಸ್ಥಳ ಕೇಸ್​ನಲ್ಲಿ ನನ್ನ ಹೆಸರು' ''ಧರ್ಮಸ್ಥಳ ಕೇಸ್​​ನಲ್ಲಿ ನನ್ನ ಹೆಸರು ಕೇಳಿ ಬರ್ತಿದೆ. ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನು ಅಲ್ಲ. ಮತ್ಯಾರನ್ನು ಭೇಟಿ ಮಾಡಿಲ್ಲ ನಾನೊಬ್ಬ ಸಾಮಾಜಿಕ ಕಾರ್ಯಕರ್ತ, ಧರ್ಮಸ್ಥಳ ಕೇಸ್​ ಸಂಬಂಧ SIT ರಚನೆ ಮಾಡಿ ಅಂತ ಒತ್ತಾಯ ಮಾಡಿದ್ದೆ. ಈ ಬಗ್ಗೆ ನಾನು ಟ್ವೀಟ್ ಮಾಡಿದ್ದೇನೆ'' ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. 'ಅಂದು ಗಿರೀಶ್ ಮಟ್ಟಣ್ಣನವರ್ ಫೋನ್ ಬಂತು' ಮೊಹಂತಿ ಅವರು ಇನ್ನೂ ಚಾರ್ಜ್ ತಗೊಂಡಿರಲಿಲ್ಲ. ಆಗಲೇ ನನಗೆ ಗಿರೀಶ್ ಮಟ್ಟಣ್ಣನವರ್ ಫೋನ್ ಬಂತು. ಮಾಸ್ಕ್ ವ್ಯಕ್ತಿ ನಿಮ್ಮನ್ನ ಮೀಟ್ ಮಾಡ್ಬೇಕು, ನಿಮ್ಮ ಜೊತೆ ಮಾತಾಡಬೇಕು ಅಂತಿದ್ದಾರೆ. ತಮಿಳು ಭಾಷೆಯಲ್ಲಿ ಮಾತಾಡ್ತಾರೆ ಅಂದ್ರು. ರೆಕಾರ್ಡ್ ಮಾಡಿ ಕಳಿಸಿ ಅಂದೆ. ಮಂಡ್ಯದವನು ಅಂತಾನೆ ತಮಿಳು ಮಾತಾಡ್ತಾನೆ, ತೆಲುಗು ಮಿಕ್ಸ್ ಮಾಡ್ತಾನೆ ಅಂತಾನು ಕೇಳಿದೆ ಎಂದ್ರು ಪ್ರಕಾಶ್​ ರಾಜ್​.


News18 Kannada 1 hour ago
Home Flash News