Select Location
All Locations
State
Region
City / District
ಓಮನ್ ಕರಾವಳಿಯಲ್ಲಿ US ದಾಳಿ : ಭಾರತದ ಮೂವರು ನಾವಿಕರ ದುರ್ಮರಣ

ಓಮನ್ ಕರಾವಳಿಯಲ್ಲಿ US ದಾಳಿ : ಭಾರತದ ಮೂವರು ನಾವಿಕರ ದುರ್ಮರಣ

ನವದೆಹಲಿ: ಮೂವರು ಭಾರತೀಯ ನಾವಿಕರು ವಾರದ ಹಿಂದೆಯಷ್ಟೇ ಕಾಣೆಯಾಗಿದ್ದಾರೆಂಬ ಸುದ್ದಿಯ ಬೆನ್ನಲ್ಲೇ, ಓಮನ್ ಕರಾವಳಿಯಲ್ಲಿ ಅಮೆರಿಕದ ಪಡೆಗಳು ಹಡಗಿನ ಮೇಲೆ ಮಾಡಿದ ಕರಾರುವಕ್ಕಾದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ಹಡಗು ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ. ಈ ಘಟನೆಯನ್ನು ‘ದುರಂತ’ದ ನಷ್ಟ ಎಂದು ಕರೆದ ಸಚಿವರು, ಕಾಣೆಯಾದ ಮೂವರು ನಾವಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Palau ಧ್ವಜ ಹೊತ್ತ ತೈಲ ಟ್ಯಾಂಕರ್ ಸೆಟ್ಬೆಲ್ಲೊ (MT Settebello) ನಲ್ಲಿ ಇದ್ದಿದ್ದು ಒಟ್ಟು 28 ಸಿಬ್ಬಂದಿ. ಅದರಲ್ಲಿ 24 ಭಾರತೀಯರು ಮತ್ತು 4 ವಿದೇಶಿ ಪ್ರಜೆಗಳು (ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ರಷ್ಯನ್ ಪ್ರಜೆ) ಇದ್ದರು. ಓಮನ್‌ ಕರಾವಳಿಯಲ್ಲಿ ತನ್ನ ಸೂಚನೆಗಳನ್ನು ಪಾಲಿಸಲು ವಿಫಲವಾಗಿದ್ದಕ್ಕೆ ಮತ್ತು ಇರಾನ್‌ನಿಂದ ತೈಲ ಸಾಗಿಸುತ್ತಿದ್ದಕ್ಕೆ ಹಡಗಿನ ಮೇಲೆ ದಾಳಿ ಮಾಡಿದ್ದಾಗಿ ಯುಎಸ್ ಮಿಲಿಟರಿ ಹೇಳಿಕೊಂಡಿದೆ.

‘MT Settebello ಹಡಗಿನಲ್ಲಿ ನಡೆದ ದುರಂತ ತೀವ್ರ ದುರದೃಷ್ಟಕರ. ದುಃಖಕರವೆಂದರೆ, ಆರಂಭದಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರ ಶವಗಳನ್ನು ಪತ್ತೆಹಚ್ಚಿ ಗುರುತಿಸಿದ ನಂತರ ಈಗ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ’ ಎಂದು ಸಚಿವ ಸರ್ಬಾನಂದ ಸೋನೋವಾಲ್ ‘X’ನಲ್ಲಿ ಪೋಸ್ಟ್‌ ಮಾಡಿ ನೋವು ಹಂಚಿಕೊಂಡಿದ್ದಾರೆ.

‘ಇದು ನಮ್ಮ ನೌಕಾ ಕುಟುಂಬಕ್ಕೆ ಭರಿಸಲಾರದ ನಷ್ಟ. ಈ ಕಷ್ಟದ ಸಮಯದಲ್ಲಿ ಮೋದಿ ಸರ್ಕಾರವು ಸಂಕಷ್ಟದಲ್ಲಿರುವವರ ಪರವಾಗಿ ದೃಢವಾಗಿ ನಿಂತು, ಅವರ ಹತ್ತಿರದ ಸಂಬಂಧಿಕರಿಗೆ ಬೆಂಬಲ ನೀಡಲು ಬದ್ಧವಾಗಿದೆ. ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ತಕ್ಷಣವೇ ಸ್ವದೇಶಕ್ಕೆ ಕರೆತರುವುದು ಮತ್ತು ಮೃತರ ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರಗಳನ್ನು ತ್ವರಿತವಾಗಿ ಹಿಂದಿರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದೂ ಸೋನೋವಾಲ್‌ ಹೇಳಿದರು.


News First 1 hour ago
Home Flash News