Select Location
All Locations
State
Region
City / District
ಬಿಜೆಪಿ ಸೇರಿದ ಬಿಜೆಡಿಯ ಹಿರಿಯ ನಾಯಕ ದೇಬಾಶಿಶ್ ಸಮಂತರಾಯ್

ಬಿಜೆಪಿ ಸೇರಿದ ಬಿಜೆಡಿಯ ಹಿರಿಯ ನಾಯಕ ದೇಬಾಶಿಶ್ ಸಮಂತರಾಯ್

ನವದೆಹಲಿ/ಭುವನೇಶ್ವರ್: ಒಡಿಶಾದ ಪ್ರಾದೇಶಿಕ ಪಕ್ಷವಾದ ಬಿಜು ಜನತಾ ದಳಕ್ಕೆ (ಬಿಜೆಡಿ) ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಬಿಜೆಡಿಯ ಹಿರಿಯ ನಾಯಕ ಹಾಗೂ ಮಾಜಿ ಸಂಸದ ದೇಬಾಶಿಶ್ ಸಮಂತರಾಯ್ ಅವರು ಮಂಗಳವಾರ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅವರು ಕಮಲ ಪಾಳಯಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಸೋಮವಾರವಷ್ಟೇ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಹಾಗೂ ಬಿಜೆಡಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಬಿಜೆಡಿ ಸುಪ್ರೀಮೋ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ದೀರ್ಘಕಾಲದ ಆಪ್ತರಾಗಿದ್ದ ಸಮಂತರಾಯ್ ಅವರ ಈ ನಡೆ ಒಡಿಶಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.


Udayavani 56 minutes ago
Home Flash News