Mamata Banerjee: ಬಂಗಾಳದ ಆಟದಲ್ಲಿ ಬಿಗ್ ಟ್ವಿಸ್ಟ್! TMC ಆಂತರಿಕ ವರದಿ ಲೀಕ್, ದೀದಿಗೆ ಗದ್ದುಗೆ ಪಕ್ಕಾನಾ?
ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ (Election) ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ದೇಶದ ಚಿತ್ತವೆಲ್ಲಾ ಬಂಗಾಳದ ಕಡೆ ನೆಟ್ಟಿದೆ. ಮಮತಾ ಬ್ಯಾನರ್ಜಿಗೆ (Mamata Banerjee) ಮತ್ತೆ ಗದ್ದುಗೆ ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಎಕ್ಸಿಟ್ ಪೋಲ್ಗಳು ದೀದಿಗೆ ದಿಗಿಲು ಹೆಚ್ಚಿದೆ. ಇದೀಗ ಟಿಎಂಸಿ ಆತಂರಿಕ ವರದಿ ಹೊರಬಿದ್ದಿದ್ದು, ಈ ರಿಪೋರ್ಟ್ ನೋಡಿ ಡೆಡ್ಲಿ ಅಂಗಳ ಕೂಡ ನಡುಗಿದೆ.
ಆಂತರಿಕ ವರದಿಯ ಲೆಕ್ಕಚಾರ ಹೇಗಿದೆ? 'ಟುಡೇಸ್ ಚಾಣಕ್ಯ' ನಂತಹ ಸಮೀಕ್ಷಾ ಸಂಸ್ಥೆಗಳು ಬಿಜೆಪಿ 192 ಸ್ಥಾನಗಳಲ್ಲಿ ಗೆಲ್ಲವಿದೆ ಎಂದು ಭವಿಷ್ಯ ನುಡಿದಿದೆ. 'ದಿ ವಾಲ್' ಮಾಧ್ಯಮ ವರದಿಯ ಪ್ರಕಾರ, ಎರಡು ಪ್ರಮುಖ ತೃಣಮೂಲ ಕಾಂಗ್ರೆಸ್ ಕೇಂದ್ರಗಳಾದ ಕಾಲಿಘಾಟ್ ಮತ್ತು ಕೈಮಕ್ ಸ್ಟ್ರೀಟ್‌ನ ಆಂತರಿಕ ವರದಿಯು ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ವರದಿಯಲ್ಲಿ ಟಿಎಂಸಿ ಗೆಲುವಿನ ಹಿಂದಿನ ಲೆಕ್ಕಾಚಾರ ಆಶ್ಚರ್ಯವನ್ನುಂಟು ಮಾಡುತ್ತದೆ. ಪ್ರತಿಷ್ಠೆ ಕಣವಾಗಿದೆ ಬಂಗಾಳ ಈ ಹೋರಾಟವು ಈಗ ಕೇವಲ ಮತಗಳ ಬಗ್ಗೆ ಮಾತ್ರವಲ್ಲದೆ ಪ್ರತಿಷ್ಠೆಯ ಕಣವೂ ಆಗಿ ಮಾರ್ಪಟ್ಟಿದೆ. ಸೋಲಿಯ ಭಯವೋ ಅಥವಾ ಮತಎಣಿಕೆ ಮೇಲೆ ಅನುಮಾನವೋ ಗೊತ್ತಿಲ್ಲ ಮಮತಾ ಬ್ಯಾನರ್ಜಿ ಅವರು ಎಣಿಕೆ ಕೇಂದ್ರಗಳಲ್ಲಿ ಕಾರ್ಯಕರ್ತರನ್ನು ನಿಯೋಜಿಸುವಂತೆ ಸೂಚಿಸಿದ್ದಾರೆ. ಟಿಎಂಸಿ ಮತ್ತೊಮ್ಮೆ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂಬ ವಿಶ್ವಾಸ ಅವರಿಗಿದೆ.
'ದಿ ವಾಲ್' ವರದಿಯ ಪ್ರಕಾರ, ಕಾಲಿಘಾಟ್‌ನ ಮೂಲಗಳು ಪಕ್ಷವು ರಾಜ್ಯದ ಎಲ್ಲಾ 294 ಸ್ಥಾನಗಳ ಸಂಪೂರ್ಣ ವಿಶ್ಲೇಷಣೆ ಮಾಡಿದೆ ಎಂದು ಹೇಳಿವೆ. ಟಿಎಂಸಿಯ ಆಂತರಿಕ ಸಮೀಕ್ಷೆಯ ಪ್ರಕಾರ, ಸುಮಾರು 43 ಸ್ಥಾನಗಳು 'ಬೂದು ವಲಯ'ದಲ್ಲಿವೆ. ಈ ಸ್ಥಾನಗಳಲ್ಲಿ ಗೆಲುವು ಮತ್ತು ಸೋಲಿನ ಅಂತರವು ತುಂಬಾ ಕಡಿಮೆ ಇರುವುದರಿಂದ, ಯಾವುದೇ ನಿರ್ದಿಷ್ಟ ಹಕ್ಕು ಸಾಧಿಸಲಾಗುವುದಿಲ್ಲ. ಟಿಎಂಸಿ ಈ 43 ಸ್ಥಾನಗಳನ್ನು 50:50 ಆಧಾರದ ಮೇಲೆ ನೋಡುತ್ತಿದೆ. ಅಂದರೆ, ವಾತಾವರಣವು ಸ್ವಲ್ಪ ಅನುಕೂಲಕರವಾಗಿದ್ದರೂ ಸಹ, ಈ ಸ್ಥಾನಗಳು ಮಮತಾ ಪರವಾಗಿ ಹೋಗಬಹುದು.
ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಕೈಮಕ್ ಸ್ಟ್ರೀಟ್ ಗುಂಪಿನ ಸಮೀಕ್ಷಾ ವರದಿಯು ಕಾಲಿಘಾಟ್ ಗಿಂತ ಹೆಚ್ಚು ಪಾಸಿಟಿವ್ ಆಗಿದೆ. 'ದಿ ವಾಲ್' ವರದಿಯ ಪ್ರಕಾರ, ಈ ಗುಂಪು ಟಿಎಂಸಿ 209 ರಿಂದ 229 ಸ್ಥಾನಗಳ ನಡುವೆ ದೊಡ್ಡ ಗೆಲುವು ಸಾಧಿಸುತ್ತದೆ ಎಂದು ಹೇಳಿಕೊಂಡಿದೆ. ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳಲ್ಲಿ, ವಿಶೇಷವಾಗಿ ಮುರ್ಷಿದಾಬಾದ್‌ನಲ್ಲಿ ಟಿಎಂಸಿಯ ಪ್ರಭಾವ ದೊಡ್ಡದಾಗಿದೆ ಎಂದು ಹೇಳಲಾಗುತ್ತದೆ ಮತ್ತು ಪಕ್ಷವು ಅಲ್ಲಿ 17 ಸ್ಥಾನಗಳನ್ನು ಸಂಪೂರ್ಣವಾಗಿ ಗೆಲ್ಲುತ್ತದೆ ಎಂದು ಹೇಳಲಾಗುತ್ತದೆ. ಬಿರ್ಭೂಮ್‌ನಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆಯೋ ಸಾಧ್ಯತೆ ಇದೆ.