Select Location
All Locations
State
Region
City / District
ಸಡಗರ ಸಂಭ್ರಮದಿಂದ ನಡೆದ ಐತಿಹಾಸಿಕ ಬೇತಮಂಗಲದ ಒನಕೆ ಕರಗ

ಸಡಗರ ಸಂಭ್ರಮದಿಂದ ನಡೆದ ಐತಿಹಾಸಿಕ ಬೇತಮಂಗಲದ ಒನಕೆ ಕರಗ

ಕೋಲಾರ: ಬೇತಮಂಗಲದ ಐತಿಹಾಸಿಕ ಪ್ರಸಿದ್ಧ 116ನೇ ವರ್ಷದ ಕರಗ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು, ವಸಂತ್ಯುತ್ಸವದ ಪ್ರಯುಕ್ತ ನಡೆದ ‘ಒನಕೆ ಕರಗ’ ಪ್ರದರ್ಶನವು ನೋಡುಗರ ಕಣ್ಮನ ಸೆಳೆಯಿತು. ಕರಗ ಪೂಜಾರಿ ಕೃಷ್ಣಮೂರ್ತಿ ತಲೆಯ ಮೇಲೆ ಒನಕೆ ಕರಗ ಹೊತ್ತು, ತಮಟೆ ಹಾಗೂ ವಾದ್ಯಗೋಷ್ಠಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಅತ್ಯಂತ ಸಮತೋಲನದಿಂದ ಪ್ರದರ್ಶಿಸಿದ ನೃತ್ಯವು ನೆರೆದಿದ್ದ ಸಾವಿರಾರು ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕರಗ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ನೆರವೇರಿತು. ಧ್ವಜಾರೋಹಣದ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದ್ದ ಮಹೋತ್ಸವವು ಹಸಿ ಕರಗ, ದೀಪೋತ್ಸವ ಹಾಗೂ ಹೂವಿನ ಕರಗದಂತಹ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮ ಮೂಲಕ ಸಾಗಿ ಬಂದು ನಡೆದ ವಸಂತೋತ್ಸವದೊಂದಿಗೆ ಕರಗ ಮಹೋತ್ಸವ ಮಕ್ತಾಯಗೊಂಡಿತು. 

  ದಾವಣಗೆರೆ: ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಏ.2ರಂದು ಸಂಜೆ 6 ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ ಅಪಾರ ಭಕ್ತರ ಸಮ್ಮುಖ ನೆರವೇರಲಿದೆ ಎಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಧರ್ಮದರ್ಶಿ ಗೌಡರ ಬಸವರಾಜ್ ತಿಳಿಸಿದ್ದಾರೆ. ಏ.1ರಂದು ಬೆಳಗ್ಗೆ 8 ಗಂಟೆಗೆ ರಥೋತ್ಸವದ ಕಾಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಕಂಕಣಧಾರಣೆ ನೆರವೇರಲಿದೆ. ರಾತ್ರಿ 9 ಗಂಟೆಗೆ ಸ್ವಾಮಿ ಸನ್ನಿಧಿಯಲ್ಲಿ ಸಣ್ಣ ರಥೋತ್ಸವ, ಏ.2ರಂದು ಸಂಜೆ 6 ಗಂಟೆಗೆ ದೊಡ್ಡ ರಥೋತ್ಸವ ನೆರವೇರಲಿದೆ. ಏ.3ರಂದು ಸಂಜೆ 4 ಗಂಟೆಗೆ ಬೆಲ್ಲದ ಬಂಡಿ ಉತ್ಸವ, ಏ.4ರಂದು ಬೆಳಗ್ಗೆ 8 ಗಂಟೆಗೆ ಓಕಳಿ ಕಾಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.


Asianet News 1 month ago
Home Flash News