... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಆರ್​​ಸಿಬಿಗೆ ಚಿನ್ನಸ್ವಾಮಿ ಮೈದಾನ ಅನ್​ಲಕ್ಕಿ..

ಆರ್​​ಸಿಬಿಗೆ ಚಿನ್ನಸ್ವಾಮಿ ಮೈದಾನ ಅನ್​ಲಕ್ಕಿ.. ಐದು ಕಾರಣಗಳು

ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಒಂದು ದೊಡ್ಡ ಸಮಸ್ಯೆ ಕಾಡುತ್ತಲೇ ಇದೆ. ನಾಯಕರು ಬದಲಾದ್ರು ಆಟಗಾರರು ಬದಲಾದ್ರು. ಆರ್​ಸಿಬಿಗೆ ಅಂಟಿಕೊಂಡಿರುವ ಸಮಸ್ಯೆ ಮಾತ್ರ ಬಗೆಹರಿಯಲೇ ಇಲ್ಲ. ಬೆಂಗಳೂರು ತಂಡಕ್ಕೆ ಕಾಡ್ತಿರುವ ಸಮಸ್ಯೆ ಏನು? ಪ್ರತಿ ಐಪಿಎಲ್ ಸೀಸನ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಜೋಷ್ ಅದೇ ಉತ್ಸಾಹದೊಂದಿಗೆ ಎಂಟ್ರಿ ಕೊಡುತ್ತದೆ. ಪ್ರತಿ ವರ್ಷ ಆರ್​ಸಿಬಿಯನ್ನ ಆ ಒಂದು ಸಮಸ್ಯೆ, ಬಿಟ್ಟುಬಿಡದೆ ಕಾಡುತ್ತದೆ. ಕಳೆದ 18 ವರ್ಷಗಳಿಂದ ಆ ಸಮಸ್ಯೆಗೆ ಬ್ರೇಕ್ ಹಾಕೋಕೆ ಸಾಧ್ಯವಾಗುತ್ತಲೇ ಇಲ್ಲ. ಹೊಸ ಸೀಸನ್​​ಗೂ ಮುನ್ನ ಬೆಂಗಳೂರು ತಂಡಕ್ಕೆ ಮತ್ತೆ ಹಳೇ ಸಮಸ್ಯೆ ಕಾಡೋಕೆ ಶುರುವಾಗಿದೆ.
ಚಿನ್ನಸ್ವಾಮಿ RCB ತಂಡಕ್ಕೆ ಅನ್​ಲಕ್ಕಿ ಯಾಕೆ? ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋಂ ಗ್ರೌಂಡ್ ಎಂ.ಚಿನ್ನಸ್ವಾಮಿ ಸ್ಟೇಡಿಯಮ್, ತವರು ತಂಡಕ್ಕೆ ಅನ್​ಲಕ್ಕಿ. ಈ ಕ್ರೀಡಾಂಗಣದಲ್ಲಿ ಆರ್​ಸಿಬಿ, ಗೆಲುವಿಗಿಂತ ಹೆಚ್ಚು ಪಂದ್ಯಗಳನ್ನ ಸೋತಿದೆ. ಕಳೆದ 3 ವರ್ಷಗಳ ಸಾಧನೆ ತೆಗೆದುಕೊಂಡ್ರೆ, ಚಿನ್ನಸ್ವಾಮಿಯಲ್ಲಿ ಆರ್​ಸಿಬಿ 20 ಪಂದ್ಯಗಳನ್ನಾಡಿದೆ. 10 ಪಂದ್ಯಗಳಲ್ಲಿ ಸೋತಿದ್ರೆ 9 ಪಂದ್ಯಗಳನ್ನ ಗೆದ್ದಿದೆ. 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಇಲ್ಲದ ಕಾರಣ, ಆರ್​ಸಿಬಿಯ ವಿನ್ನಿಂಗ್ ಪರ್ಸಂಟೇಜ್ 45ಕ್ಕೆ ಕುಸಿದಿದೆ. ಬೆಂಗಳೂರಿನಲ್ಲಿ ಆರ್​ಸಿಬಿ ಗೆಲ್ಲಲು ಪರದಾಡ್ತಿರೋದ್ಯಾಕೆ? ಕಾರಣ ಏನು ಗೊತ್ತಾ? ಕಾರಣ ನಂ.1 ಆರ್​ಸಿಬಿ ತಂಡದಲ್ಲಿ ಸೂಪರ್​ಸ್ಟಾರ್ ಆಟಗಾರರ ದಂಡೇ ಇದೆ. 

ತಂಡದಲ್ಲಿ ಸ್ಟಾರ್​ಡಮ್ ಇರೋದ್ರಿಂದ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಈ ಸೂಪರ್​ಸ್ಟಾರ್ ಆಟಗಾರರು ಚಿನ್ನಸ್ವಾಮಿಯಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಮೈದಾನದಲ್ಲಿ ಬಿಗ್ ಸ್ಕೋರ್ ಚೇಸಿಂಗ್​ ಮಾಡುವಲ್ಲಿ ಸಾಕಷ್ಟು ಬಾರಿ ಪರದಾಡಿದ್ದಾರೆ. ಕಾರಣ ನಂ.2 ಚಿನ್ನಸ್ವಾಮಿ ಪಿಚ್, ಹೇಳಿ ಕೇಳಿ ಬ್ಯಾಟಿಂಗ್ ಪಿಚ್. ಇಲ್ಲಿನ ಪಿಚ್ ಮತ್ತು ಕಂಡೀಷನ್ಸ್​ ಬ್ಯಾಟರ್ಸ್​ಗೆ ಹೆಚ್ಚು ನೆರವಾಗಲಿದೆ. ಅದ್ರಲ್ಲೂ ಬಿಗ್ ಹಿಟ್ಟರ್ಸ್, ಈ ಮೈದಾನದಲ್ಲಿ ಸಕ್ಸಸ್ ಕಂಡಿದ್ದಾರೆ. ಆರ್​ಸಿಬಿ ಈ ಪಿಚ್​ನಲ್ಲಿ ಬ್ಯಾಟಿಂಗ್​ನಲ್ಲಿ ಸಕ್ಸಸ್​ ಕಂಡಿದೆ ನಿಜ. ಚಿನ್ನಸ್ವಾಮಿ ಪಿಚ್​ನಲ್ಲಿ ಆರ್​ಸಿಬಿ ಬೌಲಿಂಗ್ ಅಟ್ಯಾಕ್, ಫೇಲ್ಯೂರ್​ ಆಗಿದೆ.

Source : News First

1 hour ago

Home Flash News