... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಖತೀಬ್, ಲಾರಿಜಾನಿ ಹತ್ಯೆ:

ಖತೀಬ್, ಲಾರಿಜಾನಿ ಹತ್ಯೆ: ಇರಾನ್‌ನ ಈ 4 ಪ್ರಭಾವಿ ನಾಯಕರೇ ಅಮೆರಿಕದ ಮುಂದಿನ ಗುರಿ

ಜೆಫರ್ಸನ್ ಸಿಟಿ (ಅಮೆರಿಕ): ಕಳೆದ ಮೂರ್ನಾಲ್ಕು ದಿನಗಳಲ್ಲಿ ಇರಾನ್‌ನ ಇಬ್ಬರು ಪ್ರಮುಖ ನಾಯಕರನ್ನು ಹತ್ಯೆ ಮಾಡಿರುವ ಅಮೆರಿಕವು, ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಸೇರಿ ತನ್ನ ಪಟ್ಟಿಯಲ್ಲಿರುವ ಉಳಿದ ನಾಲ್ವರ ಹತ್ಯೆಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಅಲ್ಲದೇ ಅವರ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನವನ್ನೂ ಘೋಷಿಸಿದೆ. ಮಾರ್ಚ್‌ 17 ಮತ್ತು 18ರಂದು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪ್ರಮುಖ ನಾಯಕರಾದ ಅಲಿ ಲಾರಿಜಾನಿ ಮತ್ತು ಸೈಯದ್ ಇಸ್ಮಾಯಿಲ್ ಖತೀಬ್ ಹತ್ಯೆಯಾಗಿದ್ದಾರೆ.

 ಸೈಯದ್ ಮೊಜ್ತಾಬಾ ಖಮೇನಿ, ಸೈಯದ್ ಅಲಿ-ಅಸ್ಗರ್ ಹೆಜಾಜಿ, ಜನರಲ್ ಎಸ್ಕಾಂದರ್ ಮೊಮೇನಿ, ಮೇಜರ್ ಜನರಲ್ ಯಾಹ್ಯಾ ರಹೀಮ್ ಸಫಾವಿ ಅವರಿಗಾಗಿ ಅಮೆರಿಕ ಹುಡುಕಾಟ ನಡೆಸುತ್ತಿದೆ. ಹತ್ಯೆಯಾದ ಇಬ್ಬರು ಸೇರಿ ಈ ಆರು ನಾಯಕರು ಇಸ್ಲಾಮಿಕ್ ಗಣರಾಜ್ಯದ ಪ್ರಮುಖ ಸ್ತಂಭಗಳಾದ ಧಾರ್ಮಿಕ, ರಾಜಕೀಯ, ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮೆರಿಕ–ಇಸ್ರೇಲ್‌ ಜಂಟಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟುವಲ್ಲಿ ಇವರ ತಂತ್ರಗಾರಿಕೆಯೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಮೆರಿಕ ಇವರನ್ನು 'ಹೈ-ವ್ಯಾಲ್ಯೂ ಟಾರ್ಗೆಟ್' (ಅತ್ಯಂತ ಪ್ರಮುಖ ಗುರಿಗಳು) ಎಂದು ಪರಿಗಣಿಸಿದೆ.

Source : Prajavani

1 hour ago

Home Flash News