ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆ ಮಾಡುತ್ತೇವೆ: ಇರಾನ್
ಟೆಹರಾನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆ ಮಾಡುವುದಾಗಿ ಇರಾನ್ ಗಾರ್ಡ್‌ಗಳು ಪ್ರತಿಜ್ಞೆ ಮಾಡಿದ್ದಾರೆ. ಈ ಕುರಿತು ವಿವಿಧ ಏಜೆನ್ಸಿಗಳು ವರದಿ ಮಾಡಿವೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹಿಂಸಿಸಿ ಕೊಲೆ ಮಾಡುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಹೇಳಿಕೆ ನೀಡಿದೆ. ಈ ಮೊದಲು ಬೆಂಜಮಿನ್‌ರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಹಾಗೊಂದು ವೇಳೆ ಅಪರಾಧಿ ಜೀವಂತವಾಗಿ ಇದ್ದರೆ ಆತನನ್ನು ಬೆನ್ನಟ್ಟಿ ಕೊಲ್ಲುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ ಹೇಳಿದೆ. ಈ ಬೆಳವಣಿಗೆಯ ಮಧ್ಯೆಯೇ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾರಿಗೆ ಸುರಕ್ಷಿತಗೊಳಿಸಲು ಯುದ್ಧನೌಕೆಗಳನ್ನು ರವಾನಿಸುವಂತೆ ಮಿತ್ರರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.