Bengaluru: ವಿದ್ಯಾರ್ಥಿ 2 ನಿಮಿಷ ತಡವಾಗಿ ಬಂದಿದ್ದಕ್ಕೆ 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ರಾ? ಖಾಸಗಿ ಶಾಲೆ ವಿರುದ್ಧ ಪೋಷಕರ ಆರೋಪ
ಬೆಂಗಳೂರು (ಮಾ.14): ಮಕ್ಕಳ ತಪ್ಪಿಗೆ ತಿದ್ದಿ-ಬುದ್ದಿ ಹೇಳುವ ಶಿಕ್ಷಕರೇ (Teacher) ತಪ್ಪು ಮಾಡಿದ್ರೆ ಹೇಗೆ? ಏನೂ ಅರಿಯದ 1ನೇ ಕ್ಲಾಸ್ ಬಾಲಕ 2 ನಿಮಿಷ ತಡವಾಗಿ ಬಂದ ಅನ್ನೋ ಕಾರಣಕ್ಕೆ ಅವನನ್ನು 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ ಎಂದು
ಖಾಸಗಿ ಶಾಲೆ
(Private School) ವಿರುದ್ಧ ಪೋಷಕರು (Perents) ಆರೋಪ ಮಾಡಿದ್ದಾರೆ. ಈ ವಿಚಾರ ಪೋಷಕರು ಹಾಗೂ ಪ್ರಿನ್ಸಿಪಾಲ್ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಪೋಷಕರಿಂದ ಪ್ರಿನ್ಸಿಪಾಲ್ಗೆ ಕ್ಲಾಸ್!
ಎರಡು ನಿಮಿಷ ತಡವಾಗಿ ಬಂದಿದ್ದಕ್ಕೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿದ್ದಾರೆ ಎಂದು ಬಾಲಕನ ಪೋಷಕರು ಖಾಸಗಿ ಶಾಲೆ ಪ್ರಿನ್ಸಿಪಾಲ್ ವಿರುದ್ಧ ಆರೋಪ ಮಾಡಿದ್ದಾರೆ.
ತಡವಾಗಿ ಬಂದ ಬಾಲಕನ ಕೈಗೆ ಪುಸ್ತಕ ಕೊಟ್ಟು 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ ಎಂದು ಪೋಷಕರು ಪ್ರಿನ್ಸಿಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದು ಸರಿಯೇ?
ಪೋಷಕರು ಮಗನಿಗೆ ಕೊಟ್ಟ ಶಿಕ್ಷೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿನ್ಸಿಪಾಲ್ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಒಂದನೇ ತರಗತಿ ಮಗು ಎರಡು ನಿಮಿಷ ತಡವಾಗಿ ಬಂದಿದ್ದಕ್ಕೆ ಎರಡು ಗಂಟೆ ಬಿಸಿಲಿನಲ್ಲಿ ನಿಲ್ಲಿಸಿರೋ ಘಟನೆ ಯಲಹಂಕದ ಅಟ್ಟೂರ್ ಲೇಔಟ್ ನಲ್ಲಿರೋ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಇನ್ಮುಂದೆ ಪಿಟಿ ಪಿರಿಯಡ್ ಇರಲ್ಲ
ಬಿಸಿಲಲ್ಲಿ ನಿಲ್ಲಿಸೋದ್ರಿಂದ ಮಕ್ಕಳಿಗೆ ತೊಂದರೆಯಾಗೋದಾದ್ರೆ. ಇನ್ಮುಂದೆ ಮಕ್ಕಳಿಗೆ ಪಿಟಿ ಪಿರಿಯಡ್ ಇರಲ್ಲ. ಅವಾಗ್ಲೂ ಮಕ್ಕಳು ಬಿಸಿಲಲ್ಲೇ ಅಡೋದಲ್ವಾ ಎಂದು ಪ್ರಿನ್ಸಿಪಾಲ್ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಸಿಟ್ಟಾದ ಪೋಷಕರು ಆಡಳಿತ ಮಂಡಳಿಯವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.