ಗಮನಿಸಿ, ಇಂಟರ್ ಲಾಕಿಂಗ್ ಕಾಮಗಾರಿ ಹಿನ್ನೆಲೆ ಹಲವು ರೈಲು ಸಂಚಾರ ರದ್ದು, ಯಾವೆಲ್ಲ ಮಾರ್ಗದಲ್ಲಿ ಸಂಚಾರ ರದ್ದು?
ತುಮಕೂರು: ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿ ತುಮಕೂರು ಸಮೀಪದ ಊರುಕೆರೆ ಪ್ರದೇಶದಲ್ಲಿ ನಾನ್ ಇಂಟರ್‌ಲಾಕಿಂಗ್ (Non-Interlocking) ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 15, 16 ಮತ್ತು 17 ರಂದು ಕೆಲ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದು, ಸಂಪೂರ್ಣ ರದ್ದು ಹಾಗೂ ಸಮಯ ಬದಲಾವಣೆಗಳು ಇರಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ. ಮಾರ್ಚ್ 15 ರಂದು ಮೈಸೂರು–ಚಾಮರಾಜನಗರ ಪ್ಯಾಸೆಂಜರ್, ಚಾಮರಾಜನಗರ–ತುಮಕೂರು ಪ್ಯಾಸೆಂಜರ್ತು.ಮ
ಕೂರು–ಶಿವಮೊಗ್ಗ ಎಕ್ಸ್‌ಪ್ರೆಸ್, ಯಶವಂತಪುರ –ತುಮಕೂರು ಮೆಮು, ತುಮಕೂರು–ಯಶವಂತಪುರ ಮೆಮು ಹಾಗೂ ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು ರೈಲು ಸೇವೆಗಳು ಹಿರೇಹಳ್ಳಿ ಮತ್ತು ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ ಎಂದು ತಿಳಿಸಲಾಗಿದೆ.
ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದು
ಇದೇ ದಿನ ತುಮಕೂರು–ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು–ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಪರಿಣಾಮವಾಗಿ ಈ ರೈಲು ತುಮಕೂರು ನಿಲ್ದಾಣದಿಂದ ಹೊರಡುವುದಕ್ಕೆ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಸಂಚಾರ ಆರಂಭಿಸಲಿದೆ.