... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಟೋಲ್ ದರ ಏರಿಕೆ ಬಿಸಿ: ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!

ಟೋಲ್ ದರ ಏರಿಕೆ ಬಿಸಿ: ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!

ನವದೆಹಲಿ (ಮಾ.14): ಸಾರ್ವಜನಿಕರಿಗೆ ಹೆಚ್ಚಿನ ಟೋಲ್ ದರದಿಂದ ವಿನಾಯಿತಿ ನೀಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ಕಳೆದ ವರ್ಷ ಆಗಸ್ಟ್ 15 ರಂದು ಪರಿಚಯಿಸಲಾದ 'ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್' (FASTag Annual Pass) ದರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದೆ. ಮಾರ್ಚ್ 12 ರಂದು ಹೊರಡಿಸಲಾದ ಆದೇಶದ ಪ್ರಕಾರ, ಮುಂಬರುವ 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ವಾಣಿಜ್ಯೇತರ ವಾಹನ ಬಳಕೆದಾರರು ಈಗಿನ 3,000 ರೂ. ಬದಲಿಗೆ 3,075 ರೂ.

 ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) (ತಿದ್ದುಪಡಿ) ನಿಯಮಗಳು, 2025ರ ಪ್ರಕಾರ, ಪ್ರತಿ ವರ್ಷ ವಾರ್ಷಿಕ ಪಾಸ್ ಮೊತ್ತವನ್ನು ಪರಿಷ್ಕರಿಸುವುದು ಕಡ್ಡಾಯವಾಗಿದೆ. ಪಾಸ್‌ನ ವಿಶೇಷತೆಗಳೇನು? ವಾಣಿಜ್ಯೇತರ ಉದ್ದೇಶಕ್ಕಾಗಿ ನೋಂದಾಯಿಸಲಾದ ಕಾರು, ಜೀಪ್ ಮತ್ತು ವ್ಯಾನ್ ಮಾಲೀಕರು ಈ ವಾರ್ಷಿಕ ಪಾಸ್‌ಗೆ ಅರ್ಹರು. ಈ ಪಾಸ್ ಒಂದು ವರ್ಷದವರೆಗೆ ಅಥವಾ ರಾಷ್ಟ್ರೀಯ ಹೆದ್ದಾರಿಯ ಯಾವುದೇ ಟೋಲ್ ಪ್ಲಾಜಾಗಳಲ್ಲಿ 200 ಬಾರಿ ಸಂಚರಿಸಲು ಅವಕಾಶ ನೀಡುತ್ತದೆ. ಪ್ರತಿ ಟೋಲ್‌ನಲ್ಲಿ ಎಷ್ಟು ಶುಲ್ಕವಿರುತ್ತದೆ ಎಂಬುದು ಇಲ್ಲಿ ಅನ್ವಯವಾಗುವುದಿಲ್ಲ.

 ಎಷ್ಟು ಮಂದಿ ಈ ಪಾಸ್ ಬಳಸುತ್ತಿದ್ದಾರೆ? ಸಾರಿಗೆ ಸಚಿವಾಲಯದ (MoRTH) ಡೇಟಾ ಪ್ರಕಾರ ಪ್ರಸ್ತುತ 50 ಲಕ್ಷಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಬಳಕೆದಾರರು ವಾರ್ಷಿಕ ಪಾಸ್ ಬಳಸುತ್ತಿದ್ದಾರೆ. ಒಟ್ಟು ವಾಣಿಜ್ಯೇತರ ಕಾರು ವಹಿವಾಟುಗಳಲ್ಲಿ ಸುಮಾರು 28% ಪಾಸ್ ಮೂಲಕವೇ ನಡೆಯುತ್ತಿದೆ. 2016 ರಿಂದ ಈವರೆಗೆ ಒಟ್ಟು 11.86 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ಸುಮಾರು 5.9 ಕೋಟಿ ಸಕ್ರಿಯವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 98% ಕ್ಕೂ ಹೆಚ್ಚು ಟೋಲ್ ಶುಲ್ಕವನ್ನು ಫಾಸ್ಟ್‌ಟ್ಯಾಗ್ ಮೂಲಕವೇ ಸಂಗ್ರಹಿಸಲಾಗುತ್ತಿದೆ.

Source : Asianet News

1 hour ago

Home Flash News