Select Location
All Locations
State
Region
City / District
ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್

Ban vs Pak Match Controversy: ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್

ಢಾಕಾದ ಶೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಘಾ ಅವರ ರನೌಟ್‌ ವಿವಾದಕ್ಕೆ ಕಾರಣವಾಗಿದ್ದು, ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿದ್ದ ಪಾಕಿಸ್ತಾನ ತಂಡವು 38.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಅನುಭವಿ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಸಲ್ಮಾನ್ ಅಘಾ ಕ್ರೀಸ್‌ನಲ್ಲಿದ್ದರು. ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡುತ್ತಿದ್ದ ಈ ಜೋಡಿಯನ್ನು ಮುರಿಯುವ ಪ್ರಯತ್ನದಲ್ಲಿ ಬಾಂಗ್ಲಾ ತಂಡವಿತ್ತು.

 39ನೇ ಓವರ್‌ ಎಸೆಯಲು ಬಂದ ಬಾಂಗ್ಲಾ ನಾಯಕ ಮೆಹಿದಿ ಹಸನ್ ಮಿರಾಜ್, ಹೇಗಾದರು ಮಾಡಿ ವಿಕೆಟ್ ಕೀಳುವ ಪ್ರಯತ್ನದಲ್ಲಿದ್ದರು. ಆ ಓವರ್‌ನಲ್ಲಿ 4ನೇ ಎಸೆತವನ್ನು ಮಿರಾಜ್ ಎಸೆದಾಗ ಸ್ಟ್ರೈಕ್‌ನಲ್ಲಿದ್ದ ರಿಜ್ವಾನ್, ಆ ಎಸೆತವನ್ನು ಡಿಫೆಂಡ್ ಮಾಡಿದರು. ಬಾಲ್ ಬೌಲರ್‌ ಕಡೆ ಬರುತ್ತಿರುವುದನ್ನು ನೋಡಿದ ಮಿರಾಜ್‌ ಬಾಲ್ ತಡೆಯುವ ಪ್ರಯತ್ನದಲ್ಲಿ ಆ ಕಡೆ ತೆರಳಿದಾಗ ನಾನ್‌ಸ್ಟ್ರೈಕರ್‌ನಲ್ಲಿದ್ದ ಸಲ್ಮಾನ್ ಅಘಾ ಅವರಿಗೆ ಡಿಕ್ಕಿ ಹೊಡೆದರು. ಕಾಲಿಗೆ ತಲುಗಿದ ಬಾಲ್ ಅನ್ನು ಕ್ರೀಸ್‌ನ ಹೊರಗಿದ್ದ ಅಘಾ, ಬೌಲರ್‌ಗೆ ಕೊಡಲು ತೆರಳುವ ಮುಂಚೆಯೇ ಮಿರಾಜ್ ಅವರನ್ನು ರನೌಟ್‌ ಮಾಡಿದರು. 

ಬಾಲ್‌ ಡೆಡ್‌ ಆಗಿಲ್ಲದ ಕಾರಣ ಮೂರನೇ ಅಂಪೈರ್‌ ಔಟ್‌ ಎಂದು ಘೋಷಿಸಿದರು. 62 ಎಸೆತಗಳಲ್ಲಿ 64 ರನ್‌ ಗಳಿಸಿದ್ದ ಸಲ್ಮಾನ್ ಅಘಾ, ಮೈದಾನದಲ್ಲೇ ಮಿರಾಜ್‌ನೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಂದ್ಯದ ನಂತರವೂ ಮಿರಜ್ ನಡೆಯು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಅಘಾ ಆರೋಪಿಸಿದರು.


Prajavani 1 month ago
Home Flash News