... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಯುದ್ಧದಿಂದ ಗಲ್ಫ್ ನಗರಗಳಿಗೆ ನೀರಿನ ಬಿಕ್ಕಟ್ಟು;

Gulf Countries: ಯುದ್ಧದಿಂದ ಗಲ್ಫ್ ನಗರಗಳಿಗೆ ನೀರಿನ ಬಿಕ್ಕಟ್ಟು; ತೈಲ ರಾಷ್ಟ್ರಗಳಿಗೆ ನೀರೇ ದುರ್ಬಲ ಸಂಪನ್ಮೂಲ

ಮಧ್ಯಪ್ರಾಚ್ಯದ ಗಲ್ಫ್ ರಾಷ್ಟ್ರಗಳಲ್ಲಿ ನೀರಿನ ಕೊರತೆ ವರ್ಷಗಳಿಂದಲೇ ದೊಡ್ಡ ಸವಾಲಾಗಿದೆ. ಮರುಭೂಮಿ ಪ್ರದೇಶವಾಗಿರುವ ಕಾರಣ ಇಲ್ಲಿ ನದಿಗಳು, ಸರೋವರಗಳು ಮತ್ತು ಭೂಗರ್ಭಜಲ ಸಂಪನ್ಮೂಲಗಳು ಅತೀ ಕಡಿಮೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿ ಪರ್ಷಿಯನ್ ಕೊಲ್ಲಿಯ ಇಂಧನ (Fuel) ಮೂಲಸೌಕರ್ಯಗಳಿಗೆ ಮಾತ್ರವಲ್ಲ, ನೀರಿನ ಪೂರೈಕೆಯಿಗೂ ಭಾರಿ ಆತಂಕವನ್ನುಂಟು ಮಾಡುತ್ತಿದೆ. ಈ ಪ್ರದೇಶದ ದೇಶಗಳಿಗೆ ತೈಲಕ್ಕಿಂತಲೂ ಹೆಚ್ಚು ದುರ್ಬಲ ಸಂಪನ್ಮೂಲವೆಂದರೆ (Resource) ಕುಡಿಯುವ ನೀರು. 

ಪರ್ಷಿಯನ್ ಕೊಲ್ಲಿಯ ಕರಾವಳಿಯುದ್ದಕ್ಕೂ ಸಾಲುಗಟ್ಟಿ ನಿಂತಿರುವ ನೂರಾರು ಉಪ್ಪುನೀರಿನ ಸಂಸ್ಕರಣಾ ಘಟಕಗಳು ಲಕ್ಷಾಂತರ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತಿವೆ. ಈ ಘಟಕಗಳಿಗೆ ಯಾವುದೇ ಅಡ್ಡಿ ಉಂಟಾದರೆ ಪ್ರಮುಖ ಗಲ್ಫ್ ನಗರಗಳಲ್ಲಿ ತಕ್ಷಣವೇ ಮಾನವೀಯ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ಗಲ್ಫ್ ರಾಷ್ಟ್ರಗಳಿಗೆ ತೈಲಕ್ಕಿಂತ ನೀರೇ ದೊಡ್ಡ ದುರ್ಬಲ ಸಂಪನ್ಮೂಲ, ಹೌದು ಮಧ್ಯಪ್ರಾಚ್ಯದ ಗಲ್ಫ್ ರಾಷ್ಟ್ರಗಳಲ್ಲಿ ನೀರಿನ ಕೊರತೆ ವರ್ಷಗಳಿಂದಲೇ ದೊಡ್ಡ ಸವಾಲಾಗಿದೆ. ಮರುಭೂಮಿ ಪ್ರದೇಶವಾಗಿರುವ ಕಾರಣ ಇಲ್ಲಿ ನದಿಗಳು, ಸರೋವರಗಳು ಮತ್ತು ಭೂಗರ್ಭಜಲ ಸಂಪನ್ಮೂಲಗಳು ಅತೀ ಕಡಿಮೆ. 

ಈ ಹಿನ್ನೆಲೆ ಸಮುದ್ರದ ಉಪ್ಪುನೀರನ್ನು ಶುದ್ಧಗೊಳಿಸುವ ಡಿಸಾಲಿನೇಶನ್ (ಉಪ್ಪುನೀರಿನ ಸಂಸ್ಕರಣಾ) ಘಟಕಗಳು ಕುಡಿಯುವ ನೀರಿನ ಪ್ರಮುಖ ಮೂಲವಾಗಿವೆ. ಉಪ್ಪುನೀರಿನ ಸಂಸ್ಕರಣಾ ಘಟಕಗಳು ಎಂದರೇನು? ಉಪ್ಪು ನೀರಿನ ಸಂಸ್ಕರಣಾ ಘಟಕಗಳು ಸಮುದ್ರದ ನೀರಿನಿಂದ ಉಪ್ಪು ಮತ್ತು ಖನಿಜಗಳನ್ನು ತೆಗೆದುಹಾಕಿ ಅದನ್ನು ಕುಡಿಯುವ ನೀರಾಗಿ ಪರಿವರ್ತಿಸುವ ವ್ಯವಸ್ಥೆಗಳಾಗಿವೆ. ಸಾಮಾನ್ಯವಾಗಿ ಬಳಸುವ ವಿಧಾನವೆಂದರೆ ರಿವರ್ಸ್ ಆಸ್ಮೋಸಿಸ್, ಇದರಲ್ಲಿ ಅತಿಸೂಕ್ಷ್ಮ ಪೊರೆಗಳ ಮೂಲಕ ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಲಾಗುತ್ತದೆ. ಈ ಮೂಲಕ ಉತ್ಪಾದನೆಯಾಗುವ ಶುದ್ಧ ನೀರನ್ನು ಮನೆಗಳು, ಕೈಗಾರಿಕೆಗಳು, ಹೋಟೆಲ್‌ಗಳು ಹಾಗೂ ಕೆಲ ಕೃಷಿ ಕಾರ್ಯಗಳಿಗೆ ಬಳಸಲಾಗುತ್ತದೆ.

Source : News18 Kannada

1 hour ago

Home Flash News