Select Location
All Locations
State
Region
City / District
‘ಟಾಕ್ಸಿಕ್‌’ ಕಥೆ ಇಲ್ಲದ ಸಿನಿಮಾ ಎಂದವರಿಗೆ ಮಾಸ್ಟರ್ ಆನಂದ್ ಹೇಳಿದ್ದಿಷ್ಟು

‘ಟಾಕ್ಸಿಕ್‌’ ಕಥೆ ಇಲ್ಲದ ಸಿನಿಮಾ ಎಂದವರಿಗೆ ಮಾಸ್ಟರ್ ಆನಂದ್ ಹೇಳಿದ್ದಿಷ್ಟು

ರಾಕಿಂಗ್ ಸ್ಟಾರ್ ಯಶ್ ನಟನೆ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆಗೊಂಡಿದೆ. ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಿನಿಮಾದಲ್ಲಿ ಕಥೆಯೇ ಇಲ್ಲ ಎನ್ನುತ್ತಿದ್ದರೆ, ಇನ್ನೂ ಕೆಲವರು ಸಿನಿಮಾ ಅರ್ಥವಾಗಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ನಟ ಮಾಸ್ಟರ್ ಆನಂದ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಮಾತನಾಡಿರುವ ಅವರು, ಟಾಕ್ಸಿಕ್ ಸಿನಿಮಾದ ಬಗ್ಗೆ ನಿಮ್ಮಲ್ಲಿರುವ ಗೊಂದಲಗಳನ್ನು ನಾನು ಪರಿಹರಿಸುತ್ತೇನೆ. 3 ನಿಮಿಷದ ಈ ವಿಡಿಯೊದಲ್ಲಿ ಸಿನಿಮಾದ ಬಗ್ಗೆ ವಿವರವಾಗಿ ತಿಳಿಸುತ್ತೇನೆ. ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅವರು ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದು ನಿಜಕ್ಕೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟಾಕ್ಸಿಕ್‌ನಲ್ಲಿ ಪ್ರೇಕ್ಷಕರ ಮನ ಗೆದ್ದ 9 ವರ್ಷದ ಯಂಗ್ ‘ಟಿಕೆಟ್’: ಯಾರು ಈ ಬಾಲನಟ? ಟಾಕ್ಸಿಕ್ ಸಿನಿಮಾದ ಕುರಿತು ಮಾತನಾಡಿರುವ ಆನಂದ್‌, ‘ ಈ ಸಿನಿಮಾದಲ್ಲಿ ನಾನ್-ಲೀನಿಯರ್ ಮಾದರಿಯ ಕಥೆ ಇದೆ. ಸಿನಿಮಾಗೆ ಹೋಗುವ ಮುನ್ನವೇ ಇದನ್ನು ಗಮನದಲ್ಲಿಟ್ಟುಕೊಂಡು ಹೋಗಿ. ಸಿನಿಮಾದ ಮೊದಲ ಭಾಗದಲ್ಲಿ ದೃಶ್ಯಗಳು ಹಿಂದೆ ಮುಂದೆಯಾಗುತ್ತವೆ. ಎರಡನೇ ಭಾಗದಲ್ಲಿ ಅದಕ್ಕೆ ಸ್ಪಷ್ಟಣೆ ಸಿಗುತ್ತದೆ. ಕೊನೆ 20 ನಿಮಿಷದ ಕ್ಲೈಮ್ಯಾಕ್ಸ್ ಅದ್ಬುತವಾಗಿದೆ. ಇಂತಹ ಅದ್ಬುತವಾದ ಕಥೆ ಇರುವ ಸಿನಿಮಾದಲ್ಲಿ ಕಥೆ ಏನಿದೆ ಹೇಳಿ ಸರ್ ನೋಡೋಣ ಎಂದು ಸವಾಲು ಹಾಕುವಂತವರಿಗೆ ಈ ವಿಡಿಯೊ’ ಎಂದಿದ್ದಾರೆ.

‘ಒಬ್ಬ ಹುಡುಗನ ಬಾಲ್ಯ ಹಾಳಾಯಿತು ಎಂದರೆ, ಅವನಲ್ಲಿ ಮೃಗತ್ವದ ಗುಣ ಬೆಳೆಯುತ್ತದೆ. ಆಹಾರ ತಿನ್ನುವುದು, ಇತರೆ ಪ್ರಾಣಿಗಳೊಂದಿಗೆ ಕಳಗ ಮಾಡುವುದು ಹಾಗೂ ಸಂತಾನೋತ್ಪತ್ತಿ ನಡೆಸುವುದು. ಇವು ಮೃಗದ ಗುಣಗಳಾಗಿವೆ. ಇಂತಹ ಒಬ್ಬ ವ್ಯಕಿಗೆ ಪ್ರೀತಿ ಸಿಕ್ಕರೆ ಏನಾಗುತ್ತದೆ ಹಾಗೂ ಸಂಬಂಧಗಳಿಂದ ದೂರ ಉಳಿಯುವ ಪರಿಸ್ಥಿತಿ ಬಂದಾಗ ಅವನ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದು ಸಿನಿಮಾದಲ್ಲಿದೆ’ ಎಂದು ಹೇಳಿದ್ದಾರೆ.


Prajavani 1 hour ago
Home Flash News