Select Location
All Locations
State
Region
City / District
ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ ಸಿಡಿಸಿದ ಸಿರಾಜ್:‌ ಟೆಸ್ಟ್‌ನಲ್ಲಿ 20 ಝಲಕ್.!‌

ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ ಸಿಡಿಸಿದ ಸಿರಾಜ್:‌ ಟೆಸ್ಟ್‌ನಲ್ಲಿ 20 ಝಲಕ್.!‌

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ Xl ವಿರುದ್ಧ ನಡೆದ ಮೂರು ದಿನಗಳ ಅಭ್ಯಾಸ (Warm-Up Match) ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ತಮ್ಮ ಬ್ಯಾಟಿಂಗ್ ಸಾಹಸದ ಮೂಲಕ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ನೋಂಡೆಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ ಸಿರಾಜ್ ಕೊನೆಯ ಹಂತದಲ್ಲಿ ತೋರಿದ ಬ್ಯಾಟಿಂಗ್ ಅಬ್ಬರ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಚೇಸಿಂಗ್ ವೇಳೆ ಭಾರತಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. ಶ್ರೀಲಂಕಾದ ಸ್ಪಿನ್ನರ್ ಕೇಶರ ನುವಾಂತ ಎಸೆದ ಆಖೈರು ಓವರ್‌ನ ಮೊದಲ ಮೂರು ಎಸೆತಗಳನ್ನೇ ಸಿರಾಜ್ ಹ್ಯಾಟ್ರಿಕ್ ಸಿಕ್ಸರ್‌ಗಳಾಗಿ ಪರಿವರ್ತಿಸಿ, ಇನ್ನು ಮೂರು ಎಸೆತಗಳು ಬಾಕಿ ಇರುವಂತೆಯೇ ಭಾರತವನ್ನು ಗೆಲುವಿನ ದಂಡೆಗೆ ಸೇರಿಸಿದರು.

ಮೊದಲ ಎಸೆತವನ್ನು ಕೌ ಕಾರ್ನರ್ ಮೇಲೆ ಸಿಕ್ಸರ್‌ಗೆ ಅಟ್ಟಿದ ಸಿರಾಜ್, ಎರಡನೇ ಎಸೆತವನ್ನು ನೇರವಾಗಿ ಮೈದಾನದ ಆಚೆಗೆ ಅಟ್ಟಿದರು. ಮೂರನೇ ಎಸೆತವನ್ನು ಡೀಪ್ ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸುವ ಮೂಲಕ ಜಯವನ್ನು ಸಂಭ್ರಮಿಸಿದರು. ಸಿರಾಜ್ ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಸಹಿತ ಅಬ್ಬರದ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಜೈಸ್ವಾಲ್, ಗಿಲ್ ಅಬ್ಬರ: 207 ರನ್‌ಗಳ ವಿಜಯಲಕ್ಷ್ಯವನ್ನು ಬೆನ್ನಟ್ಟಿದ ಭಾರತ, 45 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿ ಗೆಲುವು ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (61 ರನ್, 46 ಎಸೆತ) ಮತ್ತು ಶುಭಮನ್ ಗಿಲ್ (44 ರನ್) ಮೊದಲ ವಿಕೆಟ್‌ಗೆ 105 ರನ್‌ಗಳ ಭರ್ಜರಿ ಪಾಲುದಾರಿಕೆ ನೀಡಿದರು. ಅರ್ಧಶತಕದ ನಂತರ ಜೈಸ್ವಾಲ್ ಇತರ ಬ್ಯಾಟರ್‌ಗಳಿಗೆ ಅವಕಾಶ ನೀಡಲು ರಿಟೈರ್ಡ್ ಔಟ್ ಆದರೆ, ಗಿಲ್ ಬೆರಳಿನ ಗಾಯದಿಂದ ಚೇತರಿಸಿಕೊಂಡು ಉತ್ತಮ ಆಟ ಪ್ರದರ್ಶಿಸಿದ್ದು ಭಾರತಕ್ಕೆ ಶುಭ ಸಂಕೇತವಾಗಿದೆ.


Udayavani 14 days ago
Home Flash News