Select Location
All Locations
State
Region
City / District
ಭಾರತಕ್ಕೆ ಮತ್ತೊಂದು ಸರಣಿ ಸೋಲು, ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 27 ರನ್ ಅಂತರದ ಮುಖಭಂಗ

ಭಾರತಕ್ಕೆ ಮತ್ತೊಂದು ಸರಣಿ ಸೋಲು, ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 27 ರನ್ ಅಂತರದ ಮುಖಭಂಗ

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಬ್ಯಾಟಿಂಗ್ ಹೊರತಾಗಿಯೂ 27 ರನ್ ಅಂತರದ ಸೋಲು ಕಾಣುವ ಮೂಲಕ ವಿದೇಶದಲ್ಲಿ ಮತ್ತೊಂದು ಸರಣಿ ಸೋಲು ಕಂಡಿದೆ. ಲಾರ್ಡ್ಸ್ ನಲ್ಲಿ ಇಂದು ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 388 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ರೋಹಿತ್ ಶರ್ಮಾ (138) ಶತಕ, ಶುಭ್ ಮನ್ ಗಿಲ್ (77) ಮತ್ತು ವಿರಾಟ್ ಕೊಹ್ಲಿ (74) ಅರ್ಧಶತಕಗಳ ಹೊರತಾಗಿಯೂ ಗೆಲುವಿನ ದಡ ಸೇರುವಲ್ಲಿ ವಿಫಲವಾಯಿತು. ಭಾರತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳನ್ನು ಮಾತ್ರ ಕಲೆಹಾಕಲು ಶಕ್ತವಾಯಿತು. ಆ ಮೂಲಕ 27 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು. ಈ ಪಂದ್ಯದ ಸೋಲಿನ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈ ಚೆಲ್ಲಿದೆ.

ಕೊಹ್ಲಿ ಹೋರಾಟವೂ ವ್ಯರ್ಥ ಇನ್ನು ಈ ಪಂದ್ಯದಲ್ಲಿ ರೋಕೋ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ರೋಹಿತ್ ಶರ್ಮಾ 138 ರನ್ ಪೇರಿಸಿದರೆ, ವಿರಾಟ್ ಕೊಹ್ಲಿ 74 ರನ್ ಸಿಡಿಸಿದರು. ಕೊಹ್ಲಿ ಕೇವಲ 60 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 74 ರನ್ ಗಳಿಸಿ ಸ್ಯಾಮ್ ಕರನ್ ಬೌಲಿಂಗ್ ನಲ್ಲಿ ಔಟಾದರು. ಇದು ಲಾರ್ಡ್ಸ್ ನಲ್ಲಿ ಕೊಹ್ಲಿ ಮೊದಲ ಅರ್ಧಶತಕವಾಗಿದ್ದು, ಏಕದಿನ ಕ್ರಿಕೆಟ್ ವೃತ್ತಿಜೀವನದ 79ನೇ ಅರ್ಧಶತಕವಾಗಿದೆ.


Kannadapraba 1 month ago
Home Flash News