ಕಾರ್ಡಿಫ್ ಏಕದಿನ: ರೂಟ್ ಅಜೇಯ 99: ಭಾರತಕ್ಕೆ 4 ವಿಕೆಟ್ ಸೋಲು, ಸರಣಿ ಸಮಬಲ
ಕಾರ್ಡಿಫ್: ಅನುಭವಿ ಬ್ಯಾಟರ್ ಜೋ ರೂಟ್ ಅವರ ಜವಾಬ್ದಾರಿಯುತ ಅಜೇಯ 99 ರನ್‌ಗಳ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಗುರುವಾರ ನಡೆದ(ಜು.16) ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. 133 ಎಸೆತಗಳಲ್ಲಿ ಅಜೇಯ 99 ರನ್‌ಗಳಿಸಿದ ರೂಟ್, ಇಂಗ್ಲೆಂಡ್‌ನ ಇನ್ನಿಂಗ್ಸ್‌ಗೆ ಆಸರೆಯಾಗಿ ನಿಂತು ತಂಡವನ್ನು 44.1 ಓವರ್‌ಗಳಲ್ಲಿ ಗುರಿ ತಲುಪಿಸಿದರು. ಭಾರತ ಮೊದಲು ಬ್ಯಾಟಿಂಗ್ ಮಾಡಿ 44 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ (65) ಹಾಗೂ ಶ್ರೇಯಸ್ ಅಯ್ಯರ್ (66), ಜಸ್ಪ್ರೀತ್ ಬುಮ್ರಾ ಔಟಾಗದೆ 20(13ಎಸೆತ)ಪ್ರಮುಖ ಕೊಡುಗೆ ನೀಡಿದರೆ, ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.ಗಿಲ್ 31, ರೋಹಿತ್ ಶರ್ಮ 47 ಎಸೆತಗಳಲ್ಲಿ 26 ರನ್‌ಗಳಿಗೆ ಸೀಮಿತರಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಅವರ ಬ್ಯಾಟಿಂಗ್ ಲಯದ ಕೊರತೆ ಸ್ಪಷ್ಟವಾಗಿ ಗೋಚರಿಸಿತು. ಇದೀಗ ಸರಣಿಯ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಇದು ಭಾರತ ಪರ ರೋಹಿತ್ ಶರ್ಮ ಅವರ ಕೊನೆಯ ಏಕದಿನ ಪಂದ್ಯವಾಗುವ ಸಾಧ್ಯತೆಯೂ ಇದೆ. ಮಧ್ಯಮ ಕ್ರಮಾಂಕದ ವೈಫಲ್ಯ ಸೋಲಿಗೆ ಕಾರಣ: ಶುಭಮನ್ ಗಿಲ್ ಸೋಲಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶುಭಮನ್ ಗಿಲ್, ಮಧ್ಯಮ ಕ್ರಮಾಂಕದ ಕುಸಿತವೇ ಸೋಲಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು."ಇನ್ನಿಂಗ್ಸ್‌ನ ಮಧ್ಯ ಹಂತದಲ್ಲಿ ನಾವು ಗುರಿಯಾಗಿಟ್ಟಿದ್ದ ಮೊತ್ತಕ್ಕಿಂತ ಸಾಕಷ್ಟು ಕಡಿಮೆ ರನ್ ಗಳಿಸಿದ್ದೇವೆ. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳು ಸತತವಾಗಿ ಉರುಳಿದ ಪರಿಣಾಮ ಸ್ಪರ್ಧಾತ್ಮಕ ಮೊತ್ತ ಕಟ್ಟಲು ಸಾಧ್ಯವಾಗಲಿಲ್ಲ," ಎಂದು ಗಿಲ್ ಹೇಳಿದರು.