Select Location
All Locations
State
Region
City / District
1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್

1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್

ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ಭರ್ಜರಿ ವಂಚನೆ ಪ್ರಕರಣ ದಾಖಲಾಗಿದೆ. 'ಅನಂತನ್ ಕಾಡು' ಸಿನಿಮಾ ಶೂಟಿಂಗ್‌ಗಾಗಿ ಹೈದರಾಬಾದ್ ಮೂಲದ ಸಂಸ್ಥೆಯಿಂದ ಉಪಕರಣಗಳನ್ನು ಪಡೆದು, 1.8 ಕೋಟಿಗೂ ಅಧಿಕ ಬಾಕಿ ಹಣ ಪಾವತಿಸದೆ ವಂಚಿಸಿರುವ ಗಂಭೀರ ಆರೋಪ ನಟನ ಮೇಲಿದೆ. ಹಣ ಕೇಳಲು ಹೋದ ಮ್ಯಾನೇಜರ್‌ಗೆ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೂಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದ ಆರೋಪ ಇವರ ಮೇಲಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 1.8 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ನೀಡಬೇಕಾಗಿದೆ. ಈ ಸಂಬಂಧ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ.

ಭರವಸೆ ನೀಡಿದ್ದ ಆರ್ಯ ‘ತಾಹರ್ ಸಿನಿ ಟೆಕ್ನಿಕ್’ ಸಂಸ್ಥೆಯು ಜುಲೈ 10 ರಂದು ಪೊಲೀಸರಿಗೆ ಈ ದೂರು ನೀಡಿದೆ. ಆರ್ಯ ನಟನೆಯ ‘ಅನಂತನ್ ಕಾಡು’ ಸಿನಿಮಾದ ಶೂಟಿಂಗ್‌ಗಾಗಿ ಉಪಕರಣಗಳನ್ನು ಪಡೆಯಲಾಗಿತ್ತು. ಈ ವೇಳೆ ಚಿತ್ರದ ನಾಯಕ ನಟ ಆರ್ಯ ಪ್ರೊಡಕ್ಷನ್ ಹೌಸ್ ಎಲ್ಲಾ ಹಣವನ್ನು ಚುಕ್ತಾ ಮಾಡುತ್ತದೆ ಎಂದು ಭರವಸೆ ಕೊಟ್ಟಿದ್ದರು. ಒಪ್ಪಂದ ಮುರಿದ ಚಿತ್ರತಂಡ ಈ ಭರವಸೆಯ ಮೇರೆಗೆ 2025ರ ಫೆಬ್ರವರಿಯಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದವಾಗಿತ್ತು. ಹೈದರಾಬಾದ್‌ನಿಂದ ಕೇರಳಕ್ಕೆ ಡಿಜಿಟಲ್ ಕ್ಯಾಮೆರಾಗಳು ಮತ್ತು ಲೈಟಿಂಗ್ ಉಪಕರಣಗಳನ್ನು ಸರಬರಾಜು ಮಾಡಲಾಗಿತ್ತು. ಒಟ್ಟು ಒಪ್ಪಂದದ ಮೊತ್ತ 2.12 ಕೋಟಿ ರೂಪಾಯಿ ಆಗಿತ್ತು. ಆದರೆ ಉಪಕರಣಗಳನ್ನು ಬಳಸಿಕೊಂಡ ನಂತರ ಚಿತ್ರತಂಡ ಹಣ ನೀಡದೆ ವಂಚಿಸಿದೆ. 32 ಲಕ್ಷ ರೂಪಾಯಿ ನೀಡಿ ಇನ್ನುಳಿದ 1.8 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.

ಮ್ಯಾನೇಜರ್‌ಗೆ ಬೆದರಿಕೆ ಹಾಕಿದ ನಟ ಸಿನಿಮಾ ಬಿಡುಗಡೆಗೆ ಮುನ್ನ ಎಲ್ಲಾ ಬಾಕಿ ಹಣವನ್ನು ತೀರಿಸುವುದಾಗಿ ಚಿತ್ರತಂಡ ಹೇಳಿತ್ತು. ಹಣ ಪಾವತಿಸಿದ ನಂತರವೇ ಸಂಸ್ಥೆಯಿಂದ ‘ನೋ ಡ್ಯೂಸ್ ಸರ್ಟಿಫಿಕೇಟ್’ ಪಡೆಯುವುದಾಗಿ ಒಪ್ಪಿಕೊಂಡಿತ್ತು. ಆದರೆ ಹಲವು ಬಾರಿ ನೆನಪಿಸಿದರೂ ಚಿತ್ರತಂಡ ಹಣ ನೀಡಿಲ್ಲ. ಬಾಕಿ ಹಣ ಕೇಳಲು ಹೋದ ಸಂಸ್ಥೆಯ ಮ್ಯಾನೇಜರ್‌ಗೆ ನಟ ಆರ್ಯ ಮತ್ತು ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


TV9 Kannada 2 days ago
Home Flash News