Select Location
All Locations
State
Region
City / District
5 ಬಾರಿ ಚಾಂಪಿಯನ್‌ ಬ್ರೆಜಿಲ್‌ಗೆ ಆಘಾತಕಾರಿ ಸೋಲು – ಫುಟ್‌ಬಾಲ್ ವೃತ್ತಿ ಜೀವನಕ್ಕೆ ನೇಮ‌ರ್ ಗುಡ್‌ಬೈ

5 ಬಾರಿ ಚಾಂಪಿಯನ್‌ ಬ್ರೆಜಿಲ್‌ಗೆ ಆಘಾತಕಾರಿ ಸೋಲು – ಫುಟ್‌ಬಾಲ್ ವೃತ್ತಿ ಜೀವನಕ್ಕೆ ನೇಮ‌ರ್ ಗುಡ್‌ಬೈ

ನ್ಯೂಯಾರ್ಕ್: 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು (Brazil Team) 2026ರ ಫಿಫಾ ವಿಶ್ವಕಪ್ ಪ್ರೀ-ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ನಾರ್ವೆ ವಿರುದ್ಧ 1-2 ಗೋಲುಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದೆ. ಇದರ ಬೆನ್ನಲ್ಲೇ ಬ್ರೆಜಿಲ್‌ ತಂಡದ ಸ್ಟಾರ್‌ ಆಟಗಾರ ನೇಮ‌ರ್ (34) (Neymar) ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಮೆಟ್‌ಲೈಫ್‌ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ ನಾರ್ವೆಯ ಯುವ ತಾರೆ ಎರ್ಲಿಂಗ್ ಹಾಲೆಂಡ್, ಬ್ರೆಜಿಲ್‌ ತಂಡದ ವಿಶ್ವಕಪ್‌ ಕನಸನ್ನು ಭಗ್ನಗೊಳಿದ್ರು. ಇದರೊಂದಿಗೆ ನಾರ್ವೆ ಫಸ್ಟ್‌ ಟೈಮ್‌ ಫಿಫಾ ವಿಶ್ವಕಪ್‌ (FIFA World Cup) ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ನಾರ್ವೆ. 1990ರ ಬಳಿಕ ಬ್ರೆಜಿಲ್ ತಂಡವು ಟೂರ್ನಿಯಿಂದ ಇಷ್ಟು ಬೇಗ ಹೊರಬಿದ್ದಿರುವುದು ಇದೇ ಮೊದಲಾಗಿದೆ.

ಬ್ರೆಜಿಲ್ ಪರ ಅತಿ ಹೆಚ್ಚು ಗೋಲು ದಾಖಲೆ; ಕಣ್ಣೀರ ವಿದಾಯ

ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲುಗಳನ್ನುಗಳಿಸಿದ ದಾಖಲೆಯೊಂದಿಗೆ ನೇಮ‌ರ್ ವಿದಾಯ ಘೋಷಿಸಿದ್ದಾರೆ. ಪಂದ್ಯದ ಸೋಲಿನ ಬೆನ್ನಲ್ಲೇ ಭಾವುಕರಾದ ನೇಮರ್, ತಮ್ಮ 16 ವರ್ಷಗಳ ಸುದೀರ್ಘ ಅಂತಾರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು.


Kannadapraba 9 days ago
Home Flash News