Select Location
All Locations
State
Region
City / District
ಆತಂಕ ಸೃಷ್ಟಿಸಿದ ಬ್ಲೂಟೂತ್ ಹೆಸರು! ಹಾರಾಟದ ಮಧ್ಯದಲ್ಲೇ ವಾಪಸ್ ಆದ ಅಮೆರಿಕದ ವಿಮಾನ!

ಆತಂಕ ಸೃಷ್ಟಿಸಿದ ಬ್ಲೂಟೂತ್ ಹೆಸರು! ಹಾರಾಟದ ಮಧ್ಯದಲ್ಲೇ ವಾಪಸ್ ಆದ ಅಮೆರಿಕದ ವಿಮಾನ!

ನ್ಯೂಯಾರ್ಕ್: ಅಮೆರಿಕದಿಂದ ಸ್ಪೇನ್‌ಗೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನವೊಂದು ಪ್ರಯಾಣಿಕನೊಬ್ಬನ ಬ್ಲೂಟೂತ್ ಸಾಧನದ ಹೆಸರಿನಿಂದಾಗಿ (Bluetooth Name) ಹಾರಾಟದ ಮಧ್ಯದಲ್ಲೇ ವಾಪಸ್ ನ್ಯೂಜೆರ್ಸಿಗೆ ಮರಳಿದ ಆಘಾತಕಾರಿ ಘಟನೆ ನಡೆದಿದೆ. ವಿಮಾನದಲ್ಲಿದ್ದ ಪ್ರಯಾಣಿಕ ತಮ್ಮ ಬ್ಲೂಟೂತ್ ಸಾಧನಕ್ಕೆ ‘ಬಾಂಬ್’ (BOMB) ಎಂದು ಹೆಸರಿಟ್ಟಿದ್ದೇ ಈ ಇಡೀ ಹೈಡ್ರಾಮಾಗೆ ಕಾರಣವಾಗಿದೆ. ಘಟನೆಯ ವಿವರ ಯುನೈಟೆಡ್ ಏರ್‌ಲೈನ್ಸ್‌ಗೆ ಸೇರಿದ ‘UA236’ ವಿಮಾನವು ಮೇ 30ರ ಸಂಜೆ ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾಗೆ ಹೊರಟಿತ್ತು. 

ಬೋಯಿಂಗ್ 767 ಮಾದರಿಯ ಈ ವಿಮಾನದಲ್ಲಿ 190 ಪ್ರಯಾಣಿಕರು ಹಾಗೂ 12 ಮಂದಿ ಸಿಬ್ಬಂದಿ ಇದ್ದರು. ಆತಂಕ ಸೃಷ್ಟಿಸಿದ ನಾಲ್ಕು ಅಕ್ಷರಗಳ ಹೆಸರು! ವಿಮಾನವು ಟೇಕ್-ಆಫ್ ಆಗುತ್ತಿದ್ದಂತೆ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡಿದಾಗ ಹತ್ತಿರದಲ್ಲೇ ಇದ್ದ ಸಾಧನವೊಂದರ ಹೆಸರು ‘BOMB’ ಎಂದು ತೋರಿಸಿದೆ. ತಕ್ಷಣವೇ ಅವರು ವಿಮಾನದ ಸಿಬ್ಬಂದಿಗೆ ಈ ವಿಷಯ ಮುಟ್ಟಿಸಿದ್ದಾರೆ. ವಿಮಾನ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, "ಎಲ್ಲರೂ ತಮ್ಮ ಬ್ಲೂಟೂತ್ ಸಾಧನಗಳನ್ನು ಆಫ್ ಮಾಡಿ" ಎಂದು ಸರಣಿ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಆದರೂ ಎರಡು ಬ್ಲೂಟೂತ್ ಸಿಗ್ನಲ್‌ಗಳು ಸಕ್ರಿಯವಾಗಿಯೇ ಇದ್ದವು.


Udayavani 1 hour ago
Home Flash News