Select Location
All Locations
State
Region
City / District
ಹೈದ್ರಾಬಾದ್​​​ಗೆ ಭರ್ಜರಿ ಜಯ.. ಸೋತರೂ ಟಾಪ್-2 ಸ್ಥಾನ ಉಳಿಸಿಕೊಂಡ RCB..!

ಹೈದ್ರಾಬಾದ್​​​ಗೆ ಭರ್ಜರಿ ಜಯ.. ಸೋತರೂ ಟಾಪ್-2 ಸ್ಥಾನ ಉಳಿಸಿಕೊಂಡ RCB..!

ಬೆಂಗಳೂರು: ಐಪಿಎಲ್ 2026ರ 67ನೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ, ಪಂದ್ಯದಲ್ಲಿ ಸೋತರೂ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ತನ್ನ ‘ಟಾಪ್-2’ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ, 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿಗೆ ಸೋತರೂ ಸಿಕ್ಕಿತು ‘ಡಬಲ್ ಚಾನ್ಸ್’ ಪಂದ್ಯದಲ್ಲಿ ಸೋತರೂ ಆರ್‌ಸಿಬಿಗೆ ಒಂದು ದೊಡ್ಡ ಸಮಾಧಾನಕರ ವಿಷಯವಿದೆ. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನವನ್ನು ಉಳಿಸಿಕೊಳ್ಳಲು ಬೆಂಗಳೂರು ತಂಡಕ್ಕೆ ಕನಿಷ್ಠ 166 ರನ್ ಗಳಿಸಬೇಕಿತ್ತು. ಆ ಗುರಿಯನ್ನು ದಾಟಿದ ಕಾರಣ ಆರ್‌ಸಿಬಿ ಈಗ ಎರಡನೇ ಸ್ಥಾನದಲ್ಲಿ ಉಳಿದಿದೆ. 

ಇದರ ಅರ್ಥ, ಫೈನಲ್‌ಗೆ ಹೋಗಲು ಆರ್‌ಸಿಬಿಗೆ ಈಗ ಎರಡು ಅವಕಾಶಗಳು (ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2) ಸಿಗಲಿವೆ. ಗೆದ್ದರೂ ಹೈದರಾಬಾದ್‌ಗೆ ತಪ್ಪದ ಸಂಕಷ್ಟ ಭರ್ಜರಿ ಜಯ ಸಾಧಿಸಿದರೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ. ಹೀಗಾಗಿ, ಹೈದರಾಬಾದ್ ತಂಡಕ್ಕೆ ಫೈನಲ್ ತಲುಪಲು ಕಠಿಣ ಹಾದಿಯಿದೆ. ತಂಡವು ಮೊದಲು ಎಲಿಮಿನೇಟರ್ ಪಂದ್ಯವನ್ನು ಗೆಲ್ಲಬೇಕು, ನಂತರ ಕ್ವಾಲಿಫೈಯರ್-2 ಪಂದ್ಯದಲ್ಲೂ ಜಯ ಸಾಧಿಸಿದರೆ ಮಾತ್ರ ಫೈನಲ್ ಪ್ರವೇಶಿಸಲು ಸಾಧ್ಯವಾಗುತ್ತದೆ.

ಕಠಿಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ನಾಯಕ ರಜತ್ ಪಾಟಿದಾರ್ 39 ಎಸೆತಗಳಲ್ಲಿ 56 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್ ಬಾರಿಸಿ ಮಿಂಚಿದರು. ಉಳಿದಂತೆ ವಿರಾಟ್ ಕೊಹ್ಲಿ 15, ದೇವದತ್ ಪಡಿಕ್ಕಲ್ 21, ಟಿಮ್ ಡೇವಿಡ್ ಅಜೇಯ 15 ಮತ್ತು ಕೃನಾಲ್ ಪಾಂಡ್ಯ ಅಜೇಯ 41 ರನ್ ಗಳಿಸಿದರು. ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ಇಶಾನ್ ಮಾಲಿಂಗ 2 ವಿಕೆಟ್ ಪಡೆದರು.


News First 18 days ago
Home Flash News