Select Location
All Locations
State
Region
City / District
ಮುರುಳಿ ಕಾರ್ತಿಕ್​​ಗೆ ಸುಳ್ಳು ಹೇಳಿದ ಸೂರ್ಯವಂಶಿ.. ‘A’ ಸೆಲೆಬ್ರೇಷನ್ ಹಿಂದಿನ ರಹಸ್ಯ ಬಯಲು..!

ಮುರುಳಿ ಕಾರ್ತಿಕ್​​ಗೆ ಸುಳ್ಳು ಹೇಳಿದ ಸೂರ್ಯವಂಶಿ.. ‘A’ ಸೆಲೆಬ್ರೇಷನ್ ಹಿಂದಿನ ರಹಸ್ಯ ಬಯಲು..!

IPL-2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಸೃಷ್ಟಿಸ್ತಿರುವ ದಾಖಲೆಗಳು ಅಷ್ಟಿಷ್ಟಲ್ಲ. ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಈ 15 ವರ್ಷದ ಪೋರ, ಒಟ್ಟು 93 ರನ್ ಸಿಡಿಸಿ ಲಕ್ನೋ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಹಾಫ್ ಸೆಂಚುರಿ ಬಾರಿಸುತ್ತಿದ್ದಂತೆಯೇ ವಿಭಿನ್ನ ಸೆಲೆಬ್ರೇಷನ್ ಮಾಡಿ ಚರ್ಚೆಗೆ ಕಾರಣರಾಗಿದ್ದಾರೆ.

ಖುಷಿಯಲ್ಲಿ ಬ್ಯಾಟ್ ತೋರಿಸುತ್ತಾ ಗಾಳಿಯಲ್ಲಿ ಎರಡು ಬೆರಳುಗಳಿಂದ ಇಂಗ್ಲಿಷ್ ಅಕ್ಷರ A ಬರುವಂತೆ ಸೈನ್ ಮಾಡಿದ್ದ ‘ವಂಡರ್ ಕಿಡ್’ ನಡೆ ಎಲ್ಲರ ಗಮನ ಸೆಳೆದಿತ್ತು. ಈಗ ಈ ‘A’ ಸೆಲೆಬ್ರೇಷನ್ ಹಿಂದಿನ ಅಸಲಿ ರಹಸ್ಯ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳು ಈತನ ದೊಡ್ಡ ಮನಸ್ಸಿಗೆ ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ. ಮುರಳಿ ಕಾರ್ತಿಕ್ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ವೈಭವ್! ಪಂದ್ಯ ಮುಗಿದ ನಂತರ ಪ್ರೆಸೆಂಟೇಷನ್ ಸೆರಮನಿಯ ವೇಳೆ ಪ್ರಖ್ಯಾತ ಕಾಮೆಂಟೇಟರ್ ಮುರಳಿ ಕಾರ್ತಿಕ್ ಈ ‘A’ ಸೆಲೆಬ್ರೇಷನ್ ಬಗ್ಗೆ ವೈಭವ್‌ನನ್ನು ನೇರವಾಗಿ ಪ್ರಶ್ನಿಸಿದ್ದರು. ‘ಏನಿದು 'A' ಅಂದರೆ? ನೀನೇನಾದರೂ ಇಂಡಿಯಾ-A ತಂಡಕ್ಕೆ ಆಯ್ಕೆಯಾಗಿದ್ದೀಯಾ? ಅದಕ್ಕೆ ಹೀಗೆ ಮಾಡಿದ್ಯಾ?’ ಎಂದು ಕೇಳಿದ್ದರು.

ಇದಕ್ಕೆ ವೈಭವ್ ಅತ್ಯಂತ ಜಾಣ್ಮೆಯಿಂದ ಉತ್ತರಿಸಿ ವಿಷಯವನ್ನು ದಾಟಿಸಿದ್ದರು. ಹಾಗೆಲ್ಲ ಏನೂ ಇಲ್ಲ. ನಾನು ಸುಮ್ಮನೆ ತಮಾಷೆಗೆ ಹಾಗೆ ಮಾಡಿದೆ. ಕಳೆದ ಪಂದ್ಯದಲ್ಲಿ ಮಾಡಿದ ಸೆಲೆಬ್ರೇಷನ್‌ಗೂ ಯಾವುದೇ ಅರ್ಥ ಇರಲಿಲ್ಲ, ಇದಕ್ಕೂ ಅಷ್ಟೇ ಎನ್ನುತ್ತಾ ನಗುತ್ತಾ ಹೊರಟುಹೋಗಿದ್ದರು. ಮುರಳಿ ಕಾರ್ತಿಕ್ ಮುಂದೆ ಈ ವಿಷಯವನ್ನು ಮುಚ್ಚಿಟ್ಟಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಬಳಿ ವೈಭವ್ ತನ್ನ ಮನಸ್ಸಿನ ಅಸಲಿ ಮಾತನ್ನು ಹಂಚಿಕೊಂಡಿದ್ದಾನೆ. ಇದನ್ನೂ ಓದಿ: ರೈತ ಯುವಕನ ಮದುವೆಯಾಗಿ ಮಾದರಿಯಾದ ಅಮೃತಧಾರೆ ಖ್ಯಾತಿಯ ಶ್ವೇತಾ ಗೌಡ ಈ 'A' ಸೆಲೆಬ್ರೇಷನ್ ಮತ್ಯಾರಿಗೂ ಅಲ್ಲ, 

ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಾಯಿ ಆರತಿ ಸೂರ್ಯವಂಶಿ (Aarti Suryavanshi) ಅವರಿಗಾಗಿ ಎಂದು ಹೇಳಿದ್ದಾನೆ. ತನ್ನ ಕೆರಿಯರ್‌ನ ಅತ್ಯಂತ ಅದ್ಭುತ ಇನಿಂಗ್ಸ್ ಮತ್ತು ಈ ಹಾಫ್ ಸೆಂಚುರಿಯನ್ನು ತಾಯಿಗೆ ಅರ್ಪಿಸಲು, ಅವರ ಹೆಸರಿನ ಮೊದಲ ಅಕ್ಷರ 'A' ಅನ್ನು ಮೈದಾನದಲ್ಲಿ ತೋರಿಸಿದ್ದಾಗಿ ಹೇಳಿದ್ದಾನೆ. ಮಾಧ್ಯಮಗಳ ಮುಂದೆ ಈ ವಿಷಯವನ್ನು ದೊಡ್ಡ ಹೈಪ್ ಮಾಡುವುದು ಇಷ್ಟವಿಲ್ಲದ ಕಾರಣ ಪ್ರೆಸೆಂಟೇಷನ್‌ನಲ್ಲಿ ಸುಳ್ಳು ಹೇಳಿದ್ದಾಗಿ ಈ ಪುಟ್ಟ ಕ್ರಿಕೆಟರ್ ಒಪ್ಪಿಕೊಂಡಿದ್ದಾನೆ.


News First 21 days ago
Home Flash News