Select Location
All Locations
State
Region
City / District
Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್‌‌; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ!

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್‌‌; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ!

ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು. ದುಬೈನಿಂದ ವಾಪಸ್ ಬಂದ ರಮೇಶನಿಗೆ ಆಕೆಯ ಮೇಲೆ ಕಣ್ಣು ಬಿದ್ದಿತ್ತು. ಆಕೆ ಅಪ್ರಾಪ್ತೆಯಾಗಿದ್ದರೂ ಆಕೆಯನ್ನೇ ಮದ್ವೆಯಾಗಲೇಬೇಕೆಂದು (Marriage) ಹಠಕ್ಕೆ ಬಿದ್ದಿದ್ದ. ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದನಂತೆ. 2020ರಲ್ಲಿ ಬಾಲಕಿಯ ತಂದೆ (Father) ಈರಯ್ಯ ನೀಡಿದ್ದ ದೂರಿನ ಮೇರೆಗೆ ಬಾಗಲಕೋಟೆ ಪೊಲೀಸರು ರಮೇಶನನ್ನು ಜೈಲಿಗೆ (Jail) ಕಳುಹಿಸಿದ್ದರು. ಜೈಲಿನಿಂದ ಬಂದ ಮೇಲಾದರೂ ಸುಧಾರಿಸಿಕೊಳ್ತಾನೆ ಅನ್ಕೊಂಡಿದ್ದ ಕುಟುಂಬಕ್ಕೆ (Family) ರಮೇಶ್ ಮತ್ತೆ ಶಾಕ್ ಕೊಟ್ಟಿದ್ದ.

ಇಷ್ಟೆಲ್ಲಾ ಆದ್ರೂ ಜೈಲಿಂದ ಬಂದು ಸುಮ್ನೆ ಇರ್ತಾನಾ. ಚಾನ್ಸೇ ಇಲ್ಲ, ಮತ್ತೆ ಮಗಳ ಹಿಂದೆ ಬಿದ್ದು ಕಾಟ ಕೊಡೋಕೆ ಶುರು ಮಾಡಿದ್ನಂತೆ. ಇದರಿಂದ ರೋಸಿ ಹೋಗಿದ್ದ ಪೋಷಕರು ಕಿರಾತಕನಿಗೆ ಗೊತ್ತಾಗದಂತೆ ಮಗಳನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ಆದ್ರೆ ಕಿರಾತಕ ರಮೇಶ್, ಹೇಗೋ ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದಿದ್ದ. ಇಲ್ಲಿ ಱಪಿಡೋ ಬೈಕ್ ಓಡಿಸಿಕೊಂಡು ಜೀವನ ಮಾಡ್ತಾ ಯುವತಿಗೆ ಮದ್ವೆಯಾಗುವಂತೆ ಪೀಡಿಸ್ತಿದ್ದ. ಈ ವಿಚಾರ ತಿಳಿದ ತಂದೆ ಈರಯ್ಯ, 2024ರಲ್ಲಿ ರಮೇಶನ ವಿರುದ್ಧ ಮತ್ತೆ ಕಂಪ್ಲೆಂಟ್ ಕೊಟ್ಟರು. ಆಗಲೂ ಪೊಲೀಸರು ರಮೇಶ್‌‌ನಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಇಷ್ಟಾದರೂ ಬದಲಾಗದ ಈ ರಮೇಶ್‌ ಯುವತಿಯನ್ನು ಮದುವೆ ಆಗಲೇಬೇಕು ಅಂತಾ ಮತ್ತಷ್ಟು ಟಾರ್ಚರ್ ಕೊಡಲು ಶುರು ಮಾಡಿದ್ನಂತೆ.

ರಮೇಶ್‌ನ ಕಾಟ ಸಹಿಸಿಕೊಂಡು ತಂದೆ ಈರಯ್ಯ ಮರ್ಯಾದೆಗೆ ಅಂಜಿ ಸುಮ್ಮನಿದ್ದರು. ಅಷ್ಟಾದ್ರೂ ಕಿಡಿಗೇಡಿ ಕಾಟ ಮಾತ್ರ ನಿಲ್ಲಲಿಲ್ಲ. ರೊಚ್ಚಿಗೆದ್ದ ಯುವತಿ ತಂದೆ, ಎಷ್ಟೇ ಬುದ್ಧಿ ಹೇಳಿದರೂ ಪ್ರಯೋಜನವಿಲ್ಲ. ಈತನನ್ನು ಮುಗಿಸಲೇಬೇಕು ಅಂತಾ ಸಂಬಂಧಿಕರ ಜೊತೆ ಸೇರಿ ಕೊಲೆಗೆ ಸ್ಕೆಚ್‌ ಹಾಕಿದ್ದರು. ಏಪ್ರಿಲ್ 27ರ ರಾತ್ರಿ ರಮೇಶ್‌ನನ್ನು ಮಾತನಾಡಿಸಲು ಬಂದ ಈರಯ್ಯ & ಗ್ಯಾಂಗ್, ಆತನಿಗೆ ಕಂಠಪೂರ್ತಿ ಎಣ್ಣೆ ಕುಡಿಸಿದ್ದಾರೆ. ನಶೆ ಏರ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಶವವನ್ನು ಅಲ್ಲಾಳಸಂದ್ರದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಏಪ್ರಿಲ್ 28ರಂದು ರಾಜಕಾಲುವೆಯಲ್ಲಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.


News18 Kannada 1 hour ago
Home Flash News