Select Location
All Locations
State
Region
City / District
ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ... ಪ್ರಮುಖ ಆರೋಪಿ ಅರೆಸ್ಟ್

ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ... ಪ್ರಮುಖ ಆರೋಪಿ ಅರೆಸ್ಟ್

ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಕಂಗನಾ ರಣಾವತ್ ಮತ್ತು ಚಿರಾಗ್ ಪಾಸ್ವಾನ್ ಅವರ ಸ್ನೇಹದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಇವರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬರುತ್ತಿತ್ತು. ಆದರೆ ಈಗ ಕಂಗನಾ ಈ ಎಲ್ಲಾ ಗಾಳಿಮಾತುಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಚಿರಾಗ್ ಪಾಸ್ವಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕಂಗನಾ ಮುಕ್ತವಾಗಿ ಮಾತನಾಡಿದ್ದಾರೆ. "ಚಿರಾಗ್ ಕೇವಲ ಒಳ್ಳೆಯ ಸ್ನೇಹಿತ ಅಷ್ಟೇ. 

ಅವರನ್ನು ನೋಡಿದಾಗ ನನಗೆ ಒಬ್ಬ ಗೆಳೆಯನ ನೆನಪಾಗುತ್ತದೆಯೇ ಹೊರತು ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ಸುಮಾರು 10 ವರ್ಷಗಳಿಂದ ಪರಿಚಯವಿದೆ. ಒಂದು ವೇಳೆ ನಮ್ಮ ನಡುವೆ ಪ್ರೇಮವಿದ್ದಿದ್ದರೆ ಇಷ್ಟೊತ್ತಿಗಾಗಲೇ ನಮಗೆ ಮಕ್ಕಳಿರಬೇಕಿತ್ತು," ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೆ "ನನಗೆ ಪ್ರೇಮ ಸಂಬಂಧ ಬೆಳೆಸುವ ಇಷ್ಟವಿದ್ದಿದ್ದರೆ ಅದು ಯಾವಾಗಲೋ ಆಗುತ್ತಿತ್ತು. ಆದರೆ ಅಂತಹದ್ದೇನೂ ಇಲ್ಲ. ಅವರು ಕೂಡ ಚಿತ್ರರಂಗದ ಹಿನ್ನೆಲೆಯಿಂದ ಬಂದವರಾದ್ದರಿಂದ, ಅವರ ಜೊತೆಗಿದ್ದಾಗ ನನಗೆ ಒಳ್ಳೆಯ ಒಡನಾಟ ಇರುತ್ತದೆ," ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ.


Udayavani 1 hour ago
Home Flash News