... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ವಿಮಾನದ ಸೀಟುಗಳಲ್ಲಿ ರಕ್ತಸಿಕ್ತ ಶಾಲಾ ಬ್ಯಾಗ್,

ವಿಮಾನದ ಸೀಟುಗಳಲ್ಲಿ ರಕ್ತಸಿಕ್ತ ಶಾಲಾ ಬ್ಯಾಗ್, ಪುಟ್ಟ ಶೂಗಳು.. ಶಾಂತಿ ಮಾತುಕತೆಯಲ್ಲಿ ಜಗತ್ತಿನ ಕಣ್ಣಾಲಿಗಳನ್ನ ಒದ್ದೆ ಮಾಡಿಸಿದ ಇರಾನ್..!

ದಶಕಗಳ ವೈರತ್ವ ಮರೆತು ಅಮೆರಿಕಾ ಮತ್ತು ಇರಾನ್ ದೇಶಗಳು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ಕುಳಿತಿವೆ. ಇರಾನ್ ನಿಯೋಗವು ಈ ಮಾತುಕತೆಗೆ ಬಂದ ರೀತಿ ಮಾತ್ರ ಇಡೀ ಜಗತ್ತಿನ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗೆರ್ ಘಾಲಿಬಾಫ್ ನೇತೃತ್ವದ ತಂಡ ಬಂದ ವಿಮಾನದ ಮುಂಭಾಗದ ಸೀಟುಗಳಲ್ಲಿ ಮನುಷ್ಯರ ಬದಲು ರಕ್ತಸಿಕ್ತ ಶಾಲಾ ಚೀಲಗಳು ಮತ್ತು ಪುಟ್ಟ ಮಕ್ಕಳ ಶೂಗಳಿದ್ದವು! 

ವಿಮಾನದಲ್ಲಿದ್ದ ‘ಮೌನ’ ಸಂಗಾತಿಗಳು ಇರಾನ್ ನಿಯೋಗವು ತನ್ನ ತಂಡಕ್ಕೆ ‘ಮೀನಾಬ್ 168’ (Minab 168) ಎಂದು ಹೆಸರಿಟ್ಟಿದೆ. ಇಸ್ಲಾಮಾಬಾದ್‌ಗೆ ಪ್ರಯಾಣಿಸುವಾಗ ವಿಮಾನದ ಮೊದಲ ಸಾಲಿನ ಸೀಟುಗಳಲ್ಲಿ ಯುದ್ಧದಲ್ಲಿ ಮೃತಪಟ್ಟ ಮಕ್ಕಳ ರಕ್ತಸಿಕ್ತ ಬ್ಯಾಗ್‌ಗಳು, ಶೂಗಳು, ಬಿಳಿ ಹೂವುಗಳು ಮತ್ತು ಮಕ್ಕಳ ಫೋಟೋಗಳನ್ನು ಇರಿಸಲಾಗಿತ್ತು. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸ್ಪೀಕರ್ ಘಾಲಿಬಾಫ್, ಈ ವಿಮಾನದಲ್ಲಿ ಇವರೇ ನನ್ನ ಸಂಗಾತಿಗಳು ಎಂದು ಬರೆದುಕೊಂಡಿದ್ದಾರೆ. ಏನಿದು ಮೀನಾಬ್ ದುರಂತ?

 ಫೆಬ್ರವರಿ 28 ರಂದು ಯುದ್ಧ ಆರಂಭವಾದ ಮೊದಲ ದಿನವೇ ದಕ್ಷಿಣ ಇರಾನ್‌ನ ಮೀನಾಬ್ ಪಟ್ಟಣದ ‘ಶಜರೆ ತಯ್ಯಿಬಾ’ ಎಂಬ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ 160ಕ್ಕೂ ಹೆಚ್ಚು ಮುಗ್ಧ ಶಾಲಾ ಬಾಲಕಿಯರು ಬಲಿಯಾಗಿದ್ದರು. ಈ ಹತ್ಯಾಕಾಂಡದ ನೆನಪಿಗಾಗಿ ಮತ್ತು ಆ ಮಕ್ಕಳಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಇರಾನ್ ತನ್ನ ಶಾಂತಿ ಸಂಧಾನ ತಂಡಕ್ಕೆ ‘ಮೀನಾಬ್ 168’ ಎಂದು ಹೆಸರಿಟ್ಟಿದೆ.

Source : News First

3 hours ago

Home Flash News