... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಪ್ರಸಿದ್ಧ ಹಿಂದೂ ದೇವಾಲಯ ಇರೋ ಈ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ!

Assembly Elections: ಪ್ರಸಿದ್ಧ ಹಿಂದೂ ದೇವಾಲಯ ಇರೋ ಈ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ! ಈಗಿರುವುದು ಕೂಡಾ ಮುಸ್ಲಿಂ MLA

ಪಂಚರಾಜ್ಯ ಚುನಾವಣೆ (Five State Election) ನಡೆಯುತ್ತಿದೆ. ಕೇರಳ (Kerala), ತಮಿಳುನಾಡು (Tamil Nadu), ಪುದುಚೇರಿ, ಅಸ್ಸಾಂ (Assam), ಪಶ್ಚಿಮ ಬಂಗಾಳದಲ್ಲಿ ಹೊಸ ಶಾಸಕರು (MLA), ಹೊಸ ಸರ್ಕಾರ ರಚನೆಯಾಗಲಿದೆ. ಈಗಾಗಲೇ ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನ (Voting) ಕೂಡಾ ನಡೆದಿದೆ. ಇನ್ನು ಏಪ್ರಿಲ್ 23ರಂದು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ.
ಕೇರಳದಲ್ಲಿ ಒಂದು ವಿಧಾನಸಭಾ ಕ್ಷೇತ್ರ ತುಂಬಾನೆ ವಿಶೇಷ. ಈ ಕ್ಷೇತ್ರದಲ್ಲಿ ಪ್ರಸಿದ್ಧವಾದ ಒಂದು ಹಿಂದೂ ದೇವಾಲಯವಿದೆ. ಎಷ್ಟರ ಮಟ್ಟಿಗೆ ಪ್ರಸಿದ್ಧ ಎಂದರೆ ಯುವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮಕ್ಕಳ ನಾಮಕರಣವಾಗುತ್ತದೆ. ತೀರ್ಥಯಾತ್ರೆ ಮಾಡೋರು ಇಲ್ಲಿಗೆ ಬರುತ್ತಾರೆ. ಅಷ್ಟು ಪ್ರಸಿದ್ಧ ಹಾಗೂ ಐತಿಹಾಸಿಹ ಮಹತ್ವ ಇರುವಂತಹ ದೇವಸ್ಥಾನ.
ಈ ದೇವಸ್ಥಾನವೇ ಈ ವಿಧಾನಸಭಾ ಕ್ಷೇತ್ರದ ಗುರುತು ಕೂಡಾ ಹೌದು. ಇಲ್ಲಿ ಹಿಂದೂ ಮತದಾರರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹೆಚ್ಚಾಗಿ ಮುಸ್ಲಿಂ ಶಾಸಕರೇ ಆಯ್ಕೆಯಾಗಿದ್ದಾರೆ. ಈಗಿರುವ ಶಾಸಕರು ಕೂಡಾ ಮುಸ್ಲಿಂ. ಹಾಗಿದ್ದರೆ ಆ ವಿಧಾನಸಭಾ ಕ್ಷೇತ್ರ ಯಾವುದು ಗೊತ್ತಾ? ಗುರುವಾಯೂರು ಕ್ಷೇತ್ರ ಕೇರಳದ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನ ಇರುವಂತಹ ಗುರುವಾಯೂರು. ಈ ವಿಧಾನಸಭಾ ಕ್ಷೇತ್ರ ಅಲ್ಲಿನ ದೇವಸ್ಥಾನದಿಂದಲೇ ಫೇಮಸ್. ಆದರೆ ಈಗ ಅಲ್ಲಿರುವುದು ಮುಸ್ಲಿಂ ಶಾಸಕ. ಇಷ್ಟು ವರ್ಷಗಳ ಇತಿಹಾಸದಲ್ಲಿ ಅಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ.

Source : News18 Kannada

1 hour ago

Home Flash News