ಪಾಕ್ನಲ್ಲಿ ಅಮೆರಿಕಾ-ಇರಾನ್ ಹೈವೋಲ್ಟೇಜ್ ಸಭೆ: ವಿಶ್ವಸಮರಕ್ಕೆ ಬ್ರೇಕ್ ಬೀಳುತ್ತಾ?
ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿರುವಾಗ ಇಡೀ ವಿಶ್ವದ ಕಣ್ಣು ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮೇಲೆ ನೆಟ್ಟಿದೆ. ದಶಕಗಳ ಕಾಲದ ಶತ್ರುಗಳಾದ ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಆರಂಭವಾಗುತ್ತಿದ್ದು, ಈ ಮಧ್ಯಸ್ಥಿಕೆಗೆ ಪಾಕಿಸ್ತಾನ ವೇದಿಕೆಯಾಗಿದೆ. ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿರುವಾಗ ಇಡೀ ವಿಶ್ವದ ಕಣ್ಣು ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮೇಲೆ ನೆಟ್ಟಿದೆ. ದಶಕಗಳ ಕಾಲದ ಶತ್ರುಗಳಾದ ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಆರಂಭವಾಗುತ್ತಿದ್ದು, ಈ ಮಧ್ಯಸ್ಥಿಕೆಗೆ ಪಾಕಿಸ್ತಾನ ವೇದಿಕೆಯಾಗಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗೇರ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗ ಈಗಾಗಲೇ ಇಸ್ಲಾಮಾಬಾದ್ ತಲುಪಿದೆ. ಇವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಖುದ್ದಾಗಿ ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ಅಮೆರಿಕಾ ಪರವಾಗಿ ನಿಯೋಜಿತ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಜ್ಯಾರೆಡ್ ಕುಶ್ನರ್ ಅವರ ತಂಡ ಅಮೆರಿಕದಿಂದ ಹೊರಟಿದೆ. ಇಡೀ ಇಸ್ಲಾಮಾಬಾದ್ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಸೇನೆಯ ಕಣ್ಗಾವಲಿನಲ್ಲಿ ಮಾತುಕತೆ ನಡೆಯಲಿದೆ.