Select Location
All Locations
State
Region
City / District
ದೇಗುಲಕ್ಕೆ ಬರೋಬ್ಬರಿ 12 ಕೋಟಿ ರೂ ದೇಣಿಗೆ ಕೊಟ್ಟ ಅನಂತ್ ಅಂಬಾನಿ

ದೇಗುಲಕ್ಕೆ ಬರೋಬ್ಬರಿ 12 ಕೋಟಿ ರೂ ದೇಣಿಗೆ ಕೊಟ್ಟ ಅನಂತ್ ಅಂಬಾನಿ

ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ತಮ್ಮ ಉದಾರ ಗುಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕೇರಳದ ತಾಲಿಪರಂಬದ ಐತಿಹಾಸಿಕ ‘ರಾಜರಾಜೇಶ್ವರ ದೇವಸ್ಥಾನ’ಕ್ಕೆ ಭೇಟಿ ನೀಡಿದ ಅವರು, ದೇವಸ್ಥಾನದ ಪುನರ್ನಿರ್ಮಾಣಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಭಾರಿ ದೇಣಿಗೆಯನ್ನು ಘೋಷಿಸಿದ್ದಾರೆ. ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ತಮ್ಮ ಉದಾರ ಗುಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕೇರಳದ ತಾಲಿಪರಂಬದ ಐತಿಹಾಸಿಕ ‘ರಾಜರಾಜೇಶ್ವರ ದೇವಸ್ಥಾನ’ಕ್ಕೆ ಭೇಟಿ ನೀಡಿದ ಅವರು, ದೇವಸ್ಥಾನದ ಪುನರ್ನಿರ್ಮಾಣಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಭಾರಿ ದೇಣಿಗೆಯನ್ನು ಘೋಷಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸಿದ ಅನಂತ್ ಅಂಬಾನಿಗೆ ಅರ್ಚಕರು ಮತ್ತು ದೇವಸ್ಥಾನದ ಮಂಡಳಿಯಿಂದ ಅದ್ಧೂರಿ ಸ್ವಾಗತ ದೊರೆಯಿತು. ದರ್ಶನದ ವೇಳೆ ಅವರು ಸ್ವಾಮಿಗೆ ‘ಪೊನ್ನುಂಕುಡಂ’ (ಚಿನ್ನದ ಕುಂಭ), ಪಟ್ಟಂ, ತಾಳಿ ಮತ್ತು ತುಪ್ಪದ ನೈವೇದ್ಯ ಸೇರಿದಂತೆ ಹಲವು ವಿಶೇಷ ಕಾಣಿಕೆಗಳನ್ನು ಅರ್ಪಿಸಿದರು. ಅಲ್ಲದೆ, ದೇವಸ್ಥಾನದಲ್ಲಿ ‘ಅಶ್ವಮೇಧ ನಮಸ್ಕಾರ’ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು. ದೇವಸ್ಥಾನದ ಆವರಣವನ್ನು ವೀಕ್ಷಿಸುವಾಗ, ಪೂರ್ವ ಗೋಪುರವು ಸುಮಾರು 200 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ ಎಂಬ ವಿಷಯ ಅನಂತ್ ಅಂಬಾನಿ ಅವರ ಗಮನಕ್ಕೆ ಬಂದಿತು. ಈ ಪುರಾತನ ಗೋಪುರವನ್ನು ಜೀರ್ಣೋದ್ಧಾರ ಮಾಡಲು ದೇವಸ್ಥಾನದ ಮಂಡಳಿ ಕಳೆದ 25 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ, ಹಣಕಾಸಿನ ಕೊರತೆಯಿಂದಾಗಿ ಕೆಲಸ ಕುಂಠಿತವಾಗಿತ್ತು. ಈ ವಿಚಾರವನ್ನು ತಿಳಿದ ಅನಂತ್ ಅಂಬಾನಿ ತಕ್ಷಣವೇ ಸ್ಪಂದಿಸಿ, ಸಂಪೂರ್ಣ ಜೀರ್ಣೋದ್ಧಾರಕ್ಕೆ ಬೇಕಾದ ಹಣ ನೀಡುವುದಾಗಿ ಭರವಸೆ ನೀಡಿದರು.


News First 25 days ago
Home Flash News