... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇಸ್ರೇಲ್ ಕೋಟೆಗೆ ಲಗ್ಗೆ ಇಟ್ಟ ಇರಾನ್‌ನ Dancing Missile;

ಇಸ್ರೇಲ್ ಕೋಟೆಗೆ ಲಗ್ಗೆ ಇಟ್ಟ ಇರಾನ್‌ನ Dancing Missile; ಐರನ್ ಡೋಮ್ ಕಣ್ಣುತಪ್ಪಿಸಿ ನುಗ್ಗಿದ ಸೆಜ್ಜಿಲ್!

ನವದೆಹಲಿ (ಮಾ.16): ಫೆಬ್ರವರಿ 28 ರಿಂದ ಆರಂಭವಾಗಿರುವ ಮಧ್ಯಪ್ರಾಚ್ಯ ಮಹಾಯುದ್ಧದಲ್ಲಿ ಇರಾನ್ ತನ್ನ ಬತ್ತಳಿಕೆಯ ಅತ್ಯಂತ ಸುಧಾರಿತ ಕ್ಷಿಪಣಿಗಳನ್ನು ಪ್ರಯೋಗಿಸಲು ಆರಂಭಿಸಿದೆ. ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಭಾನುವಾರ 'ಸೆಜ್ಜಿಲ್-2' (Sejjil-2) ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ ಎಂದು ಇರಾನ್‌ನ ಪ್ರೆಸ್‌ಟಿವಿ ವರದಿ ಮಾಡಿದೆ. ಸೆಜ್ಜಿಲ್ ಕ್ಷಿಪಣಿಯು ಹಾರಾಟದ ಸಮಯದಲ್ಲಿ ದಿಕ್ಕನ್ನು ಬದಲಿಸುವ ಮತ್ತು ಅತಿ ಎತ್ತರದಲ್ಲಿ ಕುಶಲತೆಯಿಂದ ಚಲಿಸುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್‌ನ 'ಐರನ್ ಡೋಮ್'ನಂತಹ ರಕ್ಷಣಾ ಕವಚಗಳನ್ನು ಯಾಮಾರಿಸಿ ನುಗ್ಗಬಲ್ಲ ಕಾರಣ ಇದಕ್ಕೆ "ಡ್ಯಾನ್ಸಿಂಗ್ ಮಿಸೈಲ್" ಎಂಬ ಅಡ್ಡಹೆಸರೂ ಕೂಡ ಇದೆ.
ಏನಿದು ಸೆಜ್ಜಿಲ್ ಕ್ಷಿಪಣಿ? ಇದರ ವಿಶೇಷತೆಗಳೇನು? ಸೆಜ್ಜಿಲ್ ಇರಾನ್ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಎರಡು ಹಂತದ ಖಂಡಾಂತರ ಕ್ಷಿಪಣಿಯಾಗಿದೆ. ಇದಕ್ಕೆ 'ಸಜ್ಜಿಲ್' ಅಥವಾ 'ಅಶೋರಾ' ಎಂಬ ಹೆಸರುಗಳೂ ಇವೆ. ಈ ಕ್ಷಿಪಣಿಯು ಸುಮಾರು 2,000 ಕಿಲೋಮೀಟರ್ ದೂರದ ಗುರಿಯನ್ನು ಅತ್ಯಂತ ನಿಖರವಾಗಿ ತಲುಪಬಲ್ಲದು. ಅದಲ್ಲದೆ, ಸುಮಾರು 700 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಕೂಡ ಈ ಕ್ಷಿಪಣಿಗೆ ಇದೆ. ಇದು ಘನ ಇಂಧನದಿಂದ ಚಲಿಸುವುದರಿಂದ, ಹಳೆಯ ಲಿಕ್ವಿಡ್ ಇಂಧನ ಕ್ಷಿಪಣಿಗಳಿಗಿಂತ ಅತಿ ವೇಗವಾಗಿ ಉಡಾವಣೆಗೆ ಸಿದ್ಧಪಡಿಸಬಹುದು.

 ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ (CSIS) ಪ್ರಕಾರ, ಈ ಕ್ಷಿಪಣಿ ಸುಮಾರು 18 ಮೀಟರ್ ಉದ್ದ, ಸುಮಾರು 1.25 ಮೀಟರ್ ವ್ಯಾಸ ಮತ್ತು ಸುಮಾರು 23,600 ಕಿಲೋಗ್ರಾಂಗಳಷ್ಟು ತೂಗುತ್ತದೆ. ಸೆಜ್ಜಿಲ್ ಕ್ಷಿಪಣಿಯನ್ನು ವಿನ್ಯಾಸಗೊಳಿಸುವ ಕೆಲಸ 1990 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. CSIS ಪ್ರಕಾರ, ಮೊದಲ ಪರೀಕ್ಷಾರ್ಥ ಉಡಾವಣೆ 2008 ರಲ್ಲಿ ನಡೆಯಿತು, ಆಗ ಕ್ಷಿಪಣಿ ಸುಮಾರು 800 ಕಿಲೋಮೀಟರ್ ಪ್ರಯಾಣಿಸಿತ್ತು ಎಂದು ವರದಿಯಾಗಿದೆ. ಸುಧಾರಿತ ಮಾರ್ಗದರ್ಶನ ಮತ್ತು ಸಂಚರಣೆ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡಲು ಮೇ 2009 ರಲ್ಲಿ ಎರಡನೇ ಉಡಾವಣೆಯನ್ನು ನಡೆಸಲಾಯಿತು.

Source : Asianet News

25 days ago

Home Flash News