Select Location
All Locations
State
Region
City / District
ಪುದುಚೇರಿ ಅಧಿಕಾರ ಸಮರ:

ಪುದುಚೇರಿ ಅಧಿಕಾರ ಸಮರ: ಚುನಾವಣೆ ಗೆಲ್ಲಲು NDA & DMK ಮೈತ್ರಿಕೂಟಗಳ ರಣತಂತ್ರವೇನು?

ಎಐಎನ್‌ಆರ್‌ಸಿ - ಬಿಜೆಪಿ ಮೈತ್ರಿ ಬಲ: ಮುಖ್ಯಮಂತ್ರಿ ರಂಗಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು. ಸಿಎಂ ಕಳಂಕ ರಹಿತ ವ್ಯಕ್ತಿತ, ಸರ್ಕಾರದ ಜನಪ್ರಿಯತೆ. ದೌರ್ಬಲ್ಯ: ಭ್ರಷ್ಟಾಚಾರ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ, ಅಪರಾಧ ಪ್ರಕರಣಗಳ ಹೆಚ್ಚಳ. ನಕಲಿ ಔಷಧ ತಯಾರಿಕಾ ಘಟಕ ತಯಾರಿಕೆಯಲ್ಲಿ ರಾಜಕೀಯ ನಾಯಕರ ಕೈವಾಡ. ಎಐಎಡಿಂಕೆಯೂ ಸೀಟು ಹಂಚಿಕೆಗೆ ಕಾಯುತ್ತಿರುವುದು. ಅವಕಾಶ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪಾಲುದಾರನಾಗಿರುವುದಿಂದ ಅಭಿವೃದ್ಧಿಗೆ ಕೇಂದ್ರದ ಅವಲಂಬನೆ ಸವಾಲು: ರಾಜ್ಯ ಸ್ಥಾನಮಾನ ಸಿಗದಿರುವುದು. ಚುನಾಯಿತ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರದ ಕೊರತೆ. 

ಏಕೈಕ ಮಹಿಳಾ ಸಚಿವೆ ಚಂದ್ರಿರಾ ಪ್ರಿಯಂಗ ಅವರನ್ನು ತೆಗೆದು ಹಾಕಿರುವುದು. ಕೇಂದ್ರದ ನಿರಂತರ ಅವಲಂಬನೆಯೂ ಸವಾಲು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆಯೊಡ್ಡಬಹುದು. ಡಿಎಂಕೆ ಕೂಟ ಬಲ: ಕಾಂಗ್ರೆಸ್‌ ಗಟ್ಟಿಯಾಗಿ ನೆಲೆಯೂರಿದ್ದೂ ತನ್ನ ಬಲ ವಿಸ್ತರಿಸಿಕೊಳ್ಳುತ್ತಿದೆ. ಡಿಎಂಕೆಯೂ ತಳಮಟ್ಟದಲ್ಲಿ ಬೆಳೆಯುತ್ತಿದೆ. ಪ್ರಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.ದೌರ್ಬಲ್ಯ: ಮೈತ್ರಿ ನೇತೃತ್ವ ಯಾರು ವಹಿಸಬೇಕು, ಸಿಎಂ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದರಲ್ಲಿ ಕಾಂಗ್ರೆಸ್‌ ಡಿಎಂಕೆ ಒಮ್ಮತಕ್ಕೆ ಬಂದಿಲ್ಲ. ಸೀಟು ಹಂಚಿಕೆ ಕುರಿತು ಸ್ಪಷ್ಟತೆ ಇಲ್ಲ. ಅವಕಾಶ: ಅತ್ಯುತ್ತಮ ಪುದುಚೇರಿ ಜಾರಿಗೆ ತರುವಲ್ಲಿನ ಆಡಳಿತ ಸರ್ಕಾರದ ವಿಫಲತೆ, ಆಡಳಿತ ವಿರೋಧಿ ಅಲೆ. ಸವಾಲು: ಕೈ ಕೆಲವೇ ಕೆಲವು ನಾಯಕರನ್ನು ನೆಚ್ಚಿಕೊಂಡಿರುವುದು. ಮೈತ್ರಿ ಪಕ್ಷ ಡಿಎಂಕೆ ಜತೆಗಿನ ಒಳಜಗಳ. ಸೀಟು ಹಂಚಿಕೆ ಅಂತಿಮ ಹಂತಕ್ಕೆ ಬಾರದಿರುವುದು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆ ನೀಡುವ ಸಾಧ್ಯತೆ.


Asianet News 29 days ago
Home Flash News