ಟೆಹರಾನ್ ಮೇಲೆ ತೀವ್ರ ದಾಳಿ: ‘ಖುದ್ಸ್ ದಿನ’ ರ್‍ಯಾಲಿಯ ತಾಣದಲ್ಲಿ ಭಾರಿ ಸ್ಫೋಟ
ದುಬೈ (ಎಪಿ/ ಎಎಫ್‌ಪಿ): ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿ ಶುಕ್ರವಾರ ‘ಖದ್ಸ್ ದಿನ’ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಸೇರಿದ್ದ ಸ್ಥಳದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸಾವು–ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. ಈ ಪ್ರದೇಶದಲ್ಲಿ ದಾಳಿ ನಡೆಯಲಿದೆ ಎಂದು ಇಸ್ರೇಲ್ ಸೇನೆ ಎಚ್ಚರಿಕೆ ನೀಡಿತ್ತು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.
ಇಂಕ್ವೆಲಾಬ್ ಸ್ಟ್ರೀಟ್‌ನಲ್ಲಿ ಟೆಹರಾನ್ ವಿಶ್ವವಿದ್ಯಾಲಯದ ಬಳಿಯ ಫಿರ್ದೋಸಿ ಚೌಕದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಥಳವು ‘ಖುದ್ಸ್’ ಅಥವಾ ‘ಜೆರುಸಲೇಂ’ ದಿನದ ಅಂಗವಾಗಿ ನಡೆದ ರ್‍ಯಾಲಿಯ ಕೇಂದ್ರ ಸ್ಥಾನ ಆಗಿತ್ತು.
ದಿನದ ಬೆಳವಣಿಗೆ..
ಉತ್ತರ ಇರಾಕ್‌ನ ಕುರ್ದಿಸ್ತಾನ ಪ್ರದೇಶದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಫ್ರಾನ್ಸ್‌ನ ಒಬ್ಬ ಯೋಧ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಇರಾಕ್ ಪಡೆಗಳಿಗೆ ಬೆಂಬಲ ನೀಡಲು ಫ್ರಾನ್ಸ್‌ನ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.
ಸಂಘರ್ಷ ಆರಂಭವಾದಾಗಿನಿಂದ ಇರಾನ್‌ನ 6 ಸಾವಿರಕ್ಕೂ ಅಧಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.
ಟರ್ಕಿ ವಾಯು ಪ್ರದೇಶದೊಳಕ್ಕೆ ಇರಾನ್ ಹಾರಿಸಿದ ಕ್ಷಿಪಣಿಯನ್ನು ನ್ಯಾಟೊ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಟರ್ಕಿ ರಕ್ಷಣಾ ಸಚಿವಾಲಯ ಹೇಳಿದೆಸಾವು–ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಈ ಪ್ರದೇಶದಲ್ಲಿ ದಾಳಿ ನಡೆಯಲಿದೆ ಎಂದು ಇಸ್ರೇಲ್ ಸೇನೆ ಎಚ್ಚರಿಕೆ ನೀಡಿತ್ತು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.
ಇಂಕ್ವೆಲಾಬ್ ಸ್ಟ್ರೀಟ್‌ನಲ್ಲಿ ಟೆಹರಾನ್ ವಿಶ್ವವಿದ್ಯಾಲಯದ ಬಳಿಯ ಫಿರ್ದೋಸಿ ಚೌಕದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಥಳವು ‘ಖುದ್ಸ್’ ಅಥವಾ ‘ಜೆರುಸಲೇಂ’ ದಿನದ ಅಂಗವಾಗಿ ನಡೆದ ರ್‍ಯಾಲಿಯ ಕೇಂದ್ರ ಸ್ಥಾನ ಆಗಿತ್ತು.
ದಿನದ ಬೆಳವಣಿಗೆ..
ಉತ್ತರ ಇರಾಕ್‌ನ ಕುರ್ದಿಸ್ತಾನ ಪ್ರದೇಶದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಫ್ರಾನ್ಸ್‌ನ ಒಬ್ಬ ಯೋಧ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಇರಾಕ್ ಪಡೆಗಳಿಗೆ ಬೆಂಬಲ ನೀಡಲು ಫ್ರಾನ್ಸ್‌ನ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.
ಸಂಘರ್ಷ ಆರಂಭವಾದಾಗಿನಿಂದ ಇರಾನ್‌ನ 6 ಸಾವಿರಕ್ಕೂ ಅಧಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.
ಟರ್ಕಿ ವಾಯು ಪ್ರದೇಶದೊಳಕ್ಕೆ ಇರಾನ್ ಹಾರಿಸಿದ ಕ್ಷಿಪಣಿಯನ್ನು ನ್ಯಾಟೊ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಟರ್ಕಿ ರಕ್ಷಣಾ ಸಚಿವಾಲಯ ಹೇಳಿದೆ