₹ 1 ಲಕ್ಷ ಕೋಟಿ ಮೊತ್ತದ ‘ಆರ್ಥಿಕ ಸ್ಥಿರೀಕರಣ ನಿಧಿ’: ನಿರ್ಮಲಾ ಸೀತಾರಾಮನ್
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷವೂ ಸೇರಿದಂತೆ ಜಾಗತಿಕವಾಗಿ ಎದುರಾಗುವ ಆರ್ಥಿಕ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ₹1 ಲಕ್ಷ ಕೋಟಿ ಮೊತ್ತದ ‘ಆರ್ಥಿಕ ಸ್ಥಿರೀಕರಣ ನಿಧಿ’ ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.
ಪ್ರಸ್ತಾವಿತ ನಿಧಿಯು ಇತ್ತೀಚಿನ ಬಿಕ್ಕಟ್ಟು ಮತ್ತು ಅನಿರೀಕ್ಷಿತವಾಗಿ ಬರಬಹುದಾದ ಜಾಗತಿಕ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ನೆರವಾಗುತ್ತದೆ’ ಎಂದು ಅವರು ಲೋಕಸಭೆಯಲ್ಲಿ ತಿಳಿಸಿದರು.
ಅನುದಾನಕ್ಕಾಗಿ ಎರಡನೇ ಹಂತದ ಪೂರಕ ಬೇಡಿಕೆಗಳ ಕುರಿತು ಚರ್ಚಿಸುವಾಗ ಅವರು ಈ ಕುರಿತು ಮಾಹಿತಿ ನೀಡಿದರು.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಎದುರಾಗಿರುವ ಇಂಧನ ಪೂರೈಕೆ ಸಮಸ್ಯೆ ಮತ್ತು ಅಡುಗೆ ಅನಿಲ ಕೊರತೆ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ವೇಳೆಯೇ ನಿರ್ಮಲಾ ಅವರು ಇದನ್ನು ಪ್ರಸ್ತಾಪಿಸಿರು