ಕಳೆದ 7 ಇನ್ನಿಂಗ್ಸ್ಗಳಲ್ಲಿ 5 ಬಾರಿ ಡಕ್ಔಟ್.. ಇವತ್ತು ಪ್ಲೇಯಿಂಗ್-11ನಲ್ಲಿ ಡೌಟ್..!
ಸ್ಪೋರ್ಟ್ಸ್ಟಾಪ್ ನ್ಯೂಸ್
ಕಳೆದ 7 ಇನ್ನಿಂಗ್ಸ್ಗಳಲ್ಲಿ 5 ಬಾರಿ ಡಕ್ಔಟ್.. ಇವತ್ತು ಪ್ಲೇಯಿಂಗ್-11ನಲ್ಲಿ ಡೌಟ್..! ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಅತಿಯಾದ ನಿರೀಕ್ಷೆ, ಭಾರೀ ನಿರಾಸೆ ಉಂಟು ಮಾಡುತ್ತದೆ. ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾಗೆ ಇದು ಸಖತ್ ಸೂಟಾಗುತ್ತದೆ. ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಅಭಿಷೇಕ್ ಸುಳ್ಳಾಗಿಸಿದ್ದಾರೆ. ಅತಿಯಾದ ನಿರೀಕ್ಷೆಯಿಂದ ಒತ್ತಡಕ್ಕೆ ಸಿಲುಕಿರುವ ಪಂಜಾಬ್ ಬ್ಯಾಟರ್ ರನ್ಗಳಿಸೋಕೇ ಪರದಾಡ್ತಿದ್ದಾರೆ.
ಡಿಸ್ಟ್ರಕ್ಟೀವ್, ಡೆಡ್ಲಿ, ಡೇಂಜರಸ್, ಎಕ್ಸ್ಪ್ಲೋಸಿವ್, ಫಿಯರ್ಲೆಸ್, ಅಗ್ರೆಸಿವ್. ಹೀಗೆ ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಬಗ್ಗೆ ಹೇಳಿದ್ದೇ ಹೇಳಿದ್ದು. ಹೊಗಳಿದ್ದೇ ಹೊಗಳಿದ್ದು.
ಅಭಿಷೇಕ್ ಶರ್ಮಾರನ್ನ ಹೊಗಳಿ ಹೊಗಳಿ, ಮೂಲೆಗೆ ಕೂರಿಸಲಾಗಿದೆ. ಅಂದು ಭಾರತದ ಪೋಸ್ಟರ್ ಬಾಯ್ ಆಗಿ ಮನೆ ಮನೆ ಮಾತಾಗಿದ್ದ ಪಂಜಾಬ್ ಬ್ಯಾಟರ್ ಇಂದು ಸತತ ವೈಫಲ್ಯದಿಂದ ಟೀಕೆಗೆ ಒಳಗಾಗಿದ್ದಾರೆ.
ಯುಎಸ್ಎ ವಿರುದ್ಧ 1 ಎಸೆತ 0 ರನ್
ಅಮೆರಿಕಾ ವಿರುದ್ಧ ಟಿ-20 ವಿಶ್ವಕಪ್ ಅಭಿಯಾನ ಆರಂಭಿಸಿದ ಅಭಿಷೇಕ್ ಟೂರ್ನಿಯ ಮೊದಲ ಪಂದ್ಯದಲ್ಲಿ, ರನ್ ಅಕೌಂಟ್ ಓಪನ್ ಮಾಡದೇ ಮೊದಲ ಎಸೆತಕ್ಕೆ ಔಟಾದ್ರು. ಬದ್ಧವೈರಿ ಪಾಕಿಸ್ತಾನ ವಿರುದ್ಧ ಅಭಿಷೇಕ್ ಸಿಡಿದೇಳ್ತಾರೆ ಅಂತ ನಿರೀಕ್ಷಿಸಲಾಯ್ತು. ಆದ್ರೆ ಆ ಪಂದ್ಯದಲ್ಲಿ 4 ಎಸೆತಗಳನ್ನ ಫೇಸ್ ಮಾಡಿದ ಅಭಿಷೇಕ್, ಮತ್ತೆ ಡಕೌಟ್ ಆದ್ರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಾದ್ರೂ ಅಭಿಷೇಕ್ ಖಾತೆ ತೆರೆಯಬಹುದು ಅಂತ ಅಭಿಮಾನಿಗಳು ಕಾಯ್ತಿದ್ರು.
ಆದ್ರೆ ಅಲ್ಲೂ ಅದೇ ಆಟ ಪರದಾಟ.
5 ಬಾರಿ ಅಭಿಷೇಕ್ ಡಕೌಟ್
ಟಿ-20 ವಿಶ್ವಕಪ್ನಲ್ಲಿ ಇದುವರೆಗೂ ಒಂದೇ ಒಂದು ರನ್ ಕಲೆಹಾಕದ ಅಭಿಷೇಕ್ ಸತತ 3 ಬಾರಿ ಶೂನ್ಯ ಸುತ್ತಿದ್ದಾರೆ. ಕಳೆದ 7 ಟಿ-20 ಪಂದ್ಯಗಳಲ್ಲಿ ಅಭಿಷೇಕ್ ಸಾಧನೆ ಭಯನಕವಾಗಿದೆ. 7 ಪಂದ್ಯಗಳಲ್ಲಿ ಎಡಗೈ ಬ್ಯಾಟರ್ 5 ಬಾರಿ ಡಕೌಟ್ ಆಗಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರಾನೇ. 25 ವರ್ಷದ ಅಭಿಷೇಕ್ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಗಳೇ, ಅಭಿಷೇಕ್ ಮೇಲೆ ಹೆಚ್ಚು ಒತ್ತಡ ಹೇರಿರೋದು. ಒತ್ತಡ ಮತ್ತು ನಿರೀಕ್ಷೆಗಳಿಂದಲೇ ಕ್ರೀಸ್ಗಿಳಿಯುವ ಅಭಿಷೇಕ್ ಬ್ಯಾಟಿಂಗ್ ವೇಳೆ, ಮೈಂಡ್ಸೆಟ್ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಆಟಗಾರ ವೈಫಲ್ಯ ಅನುಭವಿಸ್ತಾರೆ. ಅಭಿಷೇಕ್ಗೆ ಆಗಿರೋದು ಇದೇ.