... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ರಶ್ಮಿಕಾ-ವಿಜಯ್ ಪ್ರೇಮಕಥೆ ಹಿಂದಿದೆ ಒಂದು ದೊಡ್ಡ ರಹಸ್ಯ; ಏನೇ ಷಡ್ಯಂತ್ರ ಮಾಡಿದ್ರೂ ಈ ಜೋಡಿನ ಕಾಪಾಡ್ತಿರೋದು ಯಾವುದು?

ರಶ್ಮಿಕಾ-ವಿಜಯ್ ಪ್ರೇಮಕಥೆ ಹಿಂದಿದೆ ಒಂದು ದೊಡ್ಡ ರಹಸ್ಯ; ಏನೇ ಷಡ್ಯಂತ್ರ ಮಾಡಿದ್ರೂ ಈ ಜೋಡಿನ ಕಾಪಾಡ್ತಿರೋದು ಯಾವುದು?

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎಂದರೆ ಅದು ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna). ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ಡೇಟಿಂಗ್ ವಿಚಾರ ಸಖತ್ ಸದ್ದು ಮಾಡುತ್ತಿದೆ. ಈಗ ಈ ಗುಸುಗುಸು ಸುದ್ಧಿಗೆ ಒಂದು ದೊಡ್ಡ ತಿರುವು ಸಿಕ್ಕಿದ್ದು, ಈ ಜೋಡಿಯ ಮದುವೆಯ ಆಮಂತ್ರಣ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ಧಿಯ ನಡುವೆ, ವಿಜಯ್ ಅವರು ರಶ್ಮಿಕಾ ಬಗ್ಗೆ ಈ ಹಿಂದೆ ಆಡಿದ್ದ ಮೆಚ್ಚುಗೆಯ ಮಾತುಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ.
ಕಳೆದ ವರ್ಷ ರಶ್ಮಿಕಾ ಮಂದಣ್ಣ ಅಭಿನಯದ 'ದಿ ಗರ್ಲ್‌ಫ್ರೆಂಡ್' ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಭಾವುಕರಾಗಿ ಮಾತನಾಡಿದ್ದರು. "ನಾನು ಈ ಚಿತ್ರವನ್ನು ನೋಡಿದಾಗ ಪೂರ್ತಿ ಸಮಯ ಕಣ್ಣೀರು ಹಾಕಿದೆ. ರಶ್ಮಿಕಾ ಅವರ ನಟನೆ ಮತ್ತು ಆ ಪಾತ್ರ ನನ್ನನ್ನು ಅಷ್ಟು ಕಾಡಿತು" ಎಂದು ಅವರು ಹೇಳಿದ್ದರು. ಗೀತಾ ಗೋವಿಂದಂ ಚಿತ್ರದಿಂದ ಶುರುವಾದ ಅವರ ಸ್ನೇಹ ಈಗ ಒಂದು ಸುಂದರ ಘಟ್ಟಕ್ಕೆ ಬಂದು ತಲುಪಿದೆ. ರಶ್ಮಿಕಾ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಇಂತಹ ಸವಾಲಿನ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ವಿಜಯ್ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

 ಟೀಕೆಗಳಿಗೆ ಪ್ರೀತಿಯ ಉತ್ತರ: ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಮತ್ತು ಟೀಕೆಗಳನ್ನು ಎದುರಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ವಿಜಯ್, "ರಶ್ಮಿಕಾ ಪ್ರತಿದಿನ ಟೀಕೆ ಮತ್ತು ಅವಹೇಳನಗಳನ್ನು ಎದುರಿಸುತ್ತಾಳೆ. ನಾನಾಗಿದ್ದರೆ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದೆ, ಆದರೆ ರಶ್ಮಿಕಾ ಎಲ್ಲವನ್ನೂ ಪ್ರೀತಿ ಮತ್ತು ತಾಳ್ಮೆಯಿಂದಲೇ ಎದುರಿಸುತ್ತಾಳೆ. ಅವಳು ನಿಜಕ್ಕೂ ಒಬ್ಬ ಅದ್ಭುತ ಮಹಿಳೆ" ಎಂದು ಹಾಡಿ ಹೊಗಳಿದ್ದರು. ಸಂಗಾತಿಯ ಕಷ್ಟದ ಸಮಯದಲ್ಲಿ ಜೊತೆಗೆ ನಿಲ್ಲುವುದು ಹೇಗೆ ಎಂಬುದಕ್ಕೆ ವಿಜಯ್ ಅವರ ಮಾತುಗಳು ಒಂದು ಉತ್ತಮ ಉದಾಹರಣೆ. ಮದುವೆ ಯಾವಾಗ?

Source : Asianet News

1 day ago

Home Flash News