ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ: ಭಾರತಕ್ಕೆ ಮಣಿದ ಪಾಕ್
ಬೌಲರ್‌ಗಳ ಸಾಂಘಿಕ ಪ್ರದರ್ಶನ ಹಾಗೂ ಕನ್ನಡತಿ Vrinda Dinesh ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ‘ಎ’ ತಂಡವು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟಿ20 ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ‘ಎ’ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಟರ್ಡ್‌ಥಾಯ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವನ್ನು ಭಾರತದ ಬೌಲರ್‌ಗಳು ನಿಯಂತ್ರಣದಲ್ಲಿ ಇಟ್ಟರು.
ನಾಯಕಿ Radha Yadav (11ಕ್ಕೆ 2), ವೇಗಿ ಸಯೀಮಾ ಠಾಕೂರ್ (14ಕ್ಕೆ 2) ಹಾಗೂ ಸ್ಪಿನ್ನರ್ ಪ್ರೇಮಾ ರಾವತ್ (16ಕ್ಕೆ 2) ಅವರ ಶ್ರೇಷ್ಠ ಬೌಲಿಂಗ್‌ನಿಂದ ಪಾಕಿಸ್ತಾನ ತಂಡವನ್ನು 18.5 ಓವರ್‌ಗಳಲ್ಲಿ 93 ರನ್‌ಗಳಿಗೆ ಕಟ್ಟಿಹಾಕಲಾಯಿತು. ಆರಂಭ ಆಟಗಾರ್ತಿ ಶವಾಲ್ ಜುಲ್ಫೀಕರ್ 23 ರನ್, ಗುಲ್ ರುಕ್ 21 ರನ್ ಹಾಗೂ ಅನೋಶಾ ನಾಸಿರ್ 17 ರನ್ ಗಳಿಸಿದರೆ, ಉಳಿದ ಬ್ಯಾಟರ್‌ಗಳು ಒಂದಂಕಿ ದಾಟಲಿಲ್ಲ.
ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಎಸೆತದಲ್ಲೇ ಹುಮೇರಾ ಕಾಝಿ ಔಟಾದರು.
ಆದರೆ ವೃಂದಾ ದಿನೇಶ್ (ಔಟಾಗದೇ 55; 29 ಎಸೆತ, 12 ಬೌಂಡರಿ) ಹಾಗೂ ಅನುಷ್ಕಾ ಶರ್ಮಾ 24 ರನ್ ಸೇರಿಸಿ ಎರಡನೇ ವಿಕೆಟ್‌ಗೆ 78 ರನ್‌ಗಳ ಜೊತೆಯಾಟ ನಡೆಸಿದರು. ನಂತರ ತೇಜಲ್ ಹಸಬ್ನಿಸ್ ಜೊತೆಗೂಡಿ ವೃಂದಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ 10.1 ಓವರ್‌ಗಳಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿ 59 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು.