T20 World Cup 2026: ಬಾಂಗ್ಲಾ ಪಂದ್ಯಗಳ ಸ್ಥಳ ಬದಲಾವಣೆ; ಬಿಸಿಸಿಐ ಮಹತ್ವದ ನಿರ್ಧಾರ
Bangladesh T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಪಂದ್ಯಗಳ ವೇಳಾಪಟ್ಟಿ ಬದಲಾವಣೆಯಾಗುವ ಸಾಧ್ಯತೆಯಿದೆ. ಮುಸ್ತಾಫಿಜುರ್ ರೆಹಮಾನ್ ವಿಚಾರದ ನಂತರ ಬಾಂಗ್ಲಾ ಕ್ರಿಕೆಟ್ ಮಂಡಳಿ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಒತ್ತಾಯಿಸಿತ್ತು. ಆದರೆ ಬಿಸಿಸಿಐ ಒಪ್ಪದೆ, ಬಾಂಗ್ಲಾ ತಂಡದ ಪಂದ್ಯಗಳನ್ನು ಕೋಲ್ಕತ್ತಾ, ಮುಂಬೈನಿಂದ ದಕ್ಷಿಣ ಭಾರತದ ಚೆನ್ನೈ, ತಿರುವನಂತಪುರಂಗೆ ಸ್ಥಳಾಂತರಿಸಲು ಚಿಂತಿಸಿದೆ. ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.