Pro Kabaddi League: ಮುಂಬಾಗೆ ಶರಣಾದ ಬುಲ್ಸ್
ವಿಶಾಖಪಟ್ಟಣ: ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಯು ಮುಂಬಾ ತಂಡದ ವಿರುದ್ಧ 20 ಅಂಕಗಳ ಹೀನಾಯ ಸೋಲು ಕಂಡಿತು.
ಇದರೊಂದಿಗೆ ಬೆಂಗಳೂರು ತಂಡ ಹಾಲಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿಗೆ ಒಳಗಾದ ಮೊದಲ ತಂಡ ಎನಿಸಿತು. ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮೊದಲ ಹಣಾಹಣಿಯಲ್ಲಿ ಬೆಂಗಳೂರು ತಂಡ 28-48 ಅಂಕಗಳಿಂದ ಮುಂಬಾಗೆ ಶರಣಾಯಿತು. ಕೋಚ್ ಬಿ.ಸಿ. ರಮೇಶ್ ಗರಡಿಯಲ್ಲಿ ಪಳಗಿರುವ ಬುಲ್ಸ್, ಲೀಗ್ ಪಟ್ಟಿಯಲ್ಲಿ ಪಾಯಿಂಟ್ ಖಾತೆ ತೆರೆಯಲು ವಿಫಲವಾಗಿದೆ.