FIFA World Cup: ಇರಾನ್-ನ್ಯೂಜಿಲ್ಯಾಂಡ್ ಜಿದ್ದಾಜಿದ್ದಿ; 2-2 ಗೋಲುಗಳಿಂದ ಪಂದ್ಯ ರೋಚಕ ಡ್ರಾ
ಕ್ಯಾಲಿಫೋರ್ನಿಯಾ (ಅಮೆರಿಕ): ಮೈದಾನದ ಹೊರಗೆ ರಾಜಕೀಯ ಪ್ರತಿಭಟನೆಯ ಬಿಸಿ ಹಾಗೂ ಮೈದಾನದ ಒಳಗೆ ಭಾರಿ ಜಿದ್ದಾಜಿದ್ದಿನ ನಡುವೆ ನಡೆದ ಫಿಫಾ ವಿಶ್ವಕಪ್‌ನ (FIFA World Cup 2026) ತನ್ನ ಆರಂಭಿಕ ಪಂದ್ಯದಲ್ಲಿ ಇರಾನ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು 2-2 ಗೋಲುಗಳ ರೋಚಕ ಡ್ರಾ ಸಾಧಿಸಿವೆ. ಪಂದ್ಯದಲ್ಲಿ ಎರಡು ಬಾರಿ ಹಿನ್ನಡೆ ಅನುಭವಿಸಿದರೂ ಅದ್ಭುತವಾಗಿ ತಿರುಗಿಬಿದ್ದ ಇರಾನ್, ಸೋಲಿನಿಂದ ಪಾರಾಗುವಲ್ಲಿ ಯಶಸ್ವಿಯಾಯಿತು. ಟೆಹ್ರಾನ್‌ನಲ್ಲಿರುವ ಇರಾನ್ ಸರ್ಕಾರದ ವಿರುದ್ಧ ಕ್ರೀಡಾಂಗಣದ ಹೊರಗೆ ಇರಾನಿನ ಅಭಿಮಾನಿಗಳು ನಡೆಸಿದ ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದಾಗಿ ತೀವ್ರ ಭದ್ರತೆಯ ನಡುವೆ ಇರಾನ್ ತಂಡವು ಪಂದ್ಯದ ಒಂದು ದಿನ ಮುಂಚಿತವಾಗಿ ಕ್ಯಾಲಿಫೋರ್ನಿಯಾ ತಲುಪಿತ್ತು.
ಬೆಲ್ಜಿಯಂ-ಈಜಿಪ್ಟ್ ಪಂದ್ಯ ರೋಚಕ ಡ್ರಾ; ಉಭಯ ತಂಡಗಳಿಗೆ ತಲಾ 1 ಅಂಕ ಸಿಯೇಟಲ್ (ಅಮೆರಿಕ): ಇಲ್ಲಿನ ಲುಮೆನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್‌ನ (FIFA World Cup 2026) ಗ್ರೂಪ್ 'ಜಿ' ಹಂತದ ರೋಚಕ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ಮತ್ತು ಈಜಿಪ್ಟ್ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಈ ಡ್ರಾದೊಂದಿಗೆ ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಒಂದೊಂದು ಅಂಕ ಹಂಚಿಕೊಂಡಿವೆ. ಪಂದ್ಯದ ಆರಂಭದಿಂದಲೇ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಈಜಿಪ್ಟ್ ಪರ ಪಂದ್ಯದ 19ನೇ ನಿಮಿಷದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಇಮಾಮ್ ಅಶೌರ್ (Emam Ashour) ಆಕರ್ಷಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ, ಈ ಮುನ್ನಡೆಯ ಸಂಭ್ರಮ ದ್ವಿತೀಯಾರ್ಧದಲ್ಲಿ ಆಘಾತವಾಗಿ ಪರಿಣಮಿಸಿತು.