KSRTC Student Pass: ಕೇರಳ ವಿದ್ಯಾರ್ಥಿಗಳಿಗೂ ಕರ್ನಾಟಕದ ಫ್ರೀ ಪಾಸ್! ಆದ್ರೆ KSRTCಯಿಂದ ಈ ಕಂಡೀಷನ್ ಅಪ್ಲೈ!
ಮಂಗಳೂರು (ಜೂ.16): ಕರ್ನಾಟಕದ ವಿದ್ಯಾರ್ಥಿಗಳಿಗೆ (Student) ಉಚಿತ ಬಸ್ ಪಾಸ್ (Free Pass) ನೀಡೋದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಿಸಿದ್ರು. ಇದೀಗ ಪಾಸ್ ಹಂಚಿಕೆ ಪ್ರತಿಕ್ರಿಯೆ ಕೂಡ ನಡೆದಿದೆ. ಇದರ ನಡುವೆ ಕರ್ನಾಟಕದ ಗಡಿಯಲ್ಲಿರೋ ಕೇರಳದ (Keralam) ಕಾಸರಗೋಡು (Kasaragudu) ಜಿಲ್ಲೆಯ ವಿದ್ಯಾರ್ಥಿಗಳಿಗೂ ಕರ್ನಾಟಕದ ಉಚಿತ ಬಸ್ ಪಾಸ್ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಾಸರಗೋಡಿನ ವಿದ್ಯಾರ್ಥಿಗಳಿಗೆ ಕರ್ನಾಟಕ ಪಾಸ್ ಕಾಸರಗೋಡಿನ ವಿದ್ಯಾರ್ಥಿಗಳನ್ನು ಕೂಡ ಈ ಯೋಜನೆಯಲ್ಲಿ ಸೇರಿಸಲಾಗ್ತಿದ್ದು, ಫ್ರೀ ಪಾಸ್‌ಗಳನ್ನು ಪಡೆಯಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಬಸ್ ಪಾಸ್‌ಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ 15 ದಿನಗಳಲ್ಲಿ ಪೂರ್ಣ ಮರುಪಾವತಿ ದೊರೆಯಲಿದೆ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನೀಡಲಾದ ಅಸ್ತಿತ್ವದಲ್ಲಿರುವ ಪಾಸ್ ಗಳು ಮಾನ್ಯವಾಗಿರುತ್ತವೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ರು. ಮರುಪಾವತಿ ಪ್ರಕ್ರಿಯೆಗೆ ಕೆಎಸ್‌ಆರ್‌ಟಿಸಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಉಡುಪಿ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಿಭಾಗದಿಂದ ಇಲ್ಲಿಯವರೆಗೆ 229 ಪಾಸ್‌ಗಳನ್ನು ಅನುಮೋದಿಸಲಾಗಿದೆ. ಜೊತೆಗೆ, ಪುತ್ತೂರು ವಿಭಾಗದಿಂದ 1,223 ಪಾಸ್‌ಗಳನ್ನು ಅನುಮೋದಿಸಲಾಗಿದೆ.