Karnataka Rain: ಇನ್ನೂ ಕೆಲವೇ ಕ್ಷಣದಲ್ಲಿ7 ಜಿಲ್ಲೆಗಳಿಗೆ ಮಳೆ, ಮುಂದಿನ 2 ಗಂಟೆಯಲ್ಲಿ ಗುಡುಗು-ಸಿಡಿಲು ಸಹಿತ ವರ್ಷಧಾರೆ ಖಂಡಿತ!
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ (Monsoon) ಕೊನೆಗೂ ಕರ್ನಾಟಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಮಾನ್ಸೂನ್ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ವಾತಾವರಣ (Weather) ಸಂಪೂರ್ಣವಾಗಿ ಬದಲಾಗಿದ್ದು, ಮುಂಗಾರು ಗಾಳಿಯ ಆರ್ಭಟ ಜೋರಾಗಿದೆ. ಈ ವರ್ಷ ಮುಂಗಾರು ಮಾರುತಗಳು ಸಕಾಲದಲ್ಲಿ ಧಾವಿಸಿರುವುದರಿಂದ ಕೃಷಿ ಚಟುವಟಿಕೆಗಳಿಗೆ (Agriculture Activity) ಭಾರಿ ಚುರುಕು ಮುಟ್ಟಿದಂತಾಗಿದ್ದು, ಇಡೀ ರಾಜ್ಯಾದ್ಯಂತ ವಾತಾವರಣ ತಂಪಾಗಿದೆ. ಆದರೆ, ಇದೇ ಮುಂಗಾರಿನ ಆರ್ಭಟ ಈಗ ಒಳನಾಡು ಮತ್ತು ಉತ್ತರ ಕರ್ನಾಟಕದ (North karnataka) ಜಿಲ್ಲೆಗಳಿಗೂ ವಿಸ್ತರಿಸುತ್ತಿದ್ದು, ಹವಾಮಾನದಲ್ಲಿ ದಿಢೀರ್ ಏರುಪೇರು ಉಂಟಾಗಲು ಪ್ರಮುಖ ಕಾರಣವಾಗಿದೆ.
ಬೆಂಗಳೂರಿನ ಹವಾಮಾನ ಕೇಂದ್ರ ಹೊರಡಿಸಿರುವ ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ (ದಿನಾಂಕ: 04.06.2026), ಮುಂದಿನ 3 ಗಂಟೆಗಳ ಅವಧಿಯಲ್ಲಿ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭೀಕರ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ ಬರೋಬ್ಬರಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರಾದ ಬಿರುಗಾಳಿ ಬೀಸಲಿದ್ದು, ಇದರೊಂದಿಗೆ ಗುಡುಗು ಮತ್ತು ಮಿಂಚಿನ ಆರ್ಭಟವೂ ಜೋರಿರಲಿದೆ.