Select Location
All Locations
State
Region
City / District
IPL 2026: ಇದು ನಮ್ಮ ಆರ್‌ಸಿಬಿ ಯ ಸುವರ್ಣ ಅಧ್ಯಾಯ...: ಐಪಿಎಲ್ ಗೆಲುವಿಗೆ ಡಿಕೆಶಿ ಅಭಿನಂದನೆ

IPL 2026: ಇದು ನಮ್ಮ ಆರ್‌ಸಿಬಿ ಯ ಸುವರ್ಣ ಅಧ್ಯಾಯ...: ಐಪಿಎಲ್ ಗೆಲುವಿಗೆ ಡಿಕೆಶಿ ಅಭಿನಂದನೆ

ಬೆಂಗಳೂರು: ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ಬರೆದ ಬೆನ್ನಲ್ಲೇ ನಿಯೋಜಿತ ಸಿಎಂ ಡಿಕೆ.ಶಿವಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಆರ್‌ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅದ್ಭುತ ಧೈರ್ಯ, ಸಂಯಮ ಹಾಗೂ ಚಾಂಪಿಯನ್ಸ್ ಆಟದ ಪ್ರದರ್ಶನ ನೀಡಿದ ಬೆಂಗಳೂರು ತಂಡ, ಮತ್ತೊಮ್ಮೆ ಸಿಲಿಕಾನ್ ಸಿಟಿಯ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಈ ಐತಿಹಾಸಿಕ ಗೆಲುವಿಗೆ ಕಾರಣರಾದ ಆಟಗಾರರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ಹಾಗೂ ತಂಡದ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಕೋಟ್ಯಂತರ ಅಭಿಮಾನಿಗಳಿಗೆ ಹಾರ್ದಿಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.


Udayavani 1 month ago
Home Flash News