Select Location
All Locations
State
Region
City / District
DK Shivakumar: ಡಿಕೆಶಿ ಹೇಳಿದ ಇದೊಂದು ಮಾತಿನಿಂದಲೇ ಸಿಕ್ಕಿತಾ ಮುಖ್ಯಮಂತ್ರಿ ಪಟ್ಟ? ಆಪ್ತರ ಸಂಭ್ರಮವೋ ಸಂಭ್ರಮ

DK Shivakumar: ಡಿಕೆಶಿ ಹೇಳಿದ ಇದೊಂದು ಮಾತಿನಿಂದಲೇ ಸಿಕ್ಕಿತಾ ಮುಖ್ಯಮಂತ್ರಿ ಪಟ್ಟ? ಆಪ್ತರ ಸಂಭ್ರಮವೋ ಸಂಭ್ರಮ

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ (Leader Change) ವಿಚಾರ ಕೊನೆಗೂ ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಯಕತ್ವ ಬದಲಾವಣೆ ವಿಚಾರದ ಕ್ಲೈಮ್ಯಾಕ್ಸ್​ (Climax) ನಡೆಯುತ್ತಿದೆ, ಅತ್ತ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ (Siddaramaiah Resign) ಹೈಕಮಾಂಡ್​ ಸೂಚನೆ ನೀಡಿದ್ರೆ, ಇತ್ತ ಡಿ.ಕೆ ಶಿವಕುಮಾರ್ (D.K Shivakumar)​​ ಮುಖ್ಯಮಂತ್ರಿ ಪಟ್ಟಕ್ಕೇರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರ ಹೇಳಿದ್ದ ಒಂದು ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ.

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹುಟ್ಟಿದ್ದ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬೀಳುವ ಕಾಲ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಕಾಲ ಸನ್ನಿಹಿತದಲ್ಲಿದೆ. ಅದಕ್ಕೆ ಅವರ ಈ ಹೇಳಿಕೆ ಬಹಳ ಪುಷ್ಟಿ ನೀಡಿದೆ. ಡಿಕೆಶಿ ಹೇಳಿದ್ದ ಇದೊಂದು ಹೇಳಿಕೆಯಿಂದಲೇ ಸಿಕ್ಕಿತಾ ಸಿಎಂ ಪಟ್ಟ? ನಾಯಕತ್ವ ಬದಲಾವಣೆ ವಿಚಾರ, ಮುಖ್ಯಮಂತ್ರಿಯಾಗುವ ಮಾತು ಬಂದಾಗಲೂ ಡಿ.ಕೆ ಶಿವಕುಮಾರ್​​ ಇದೊಂದು ಮಾತು ಹೇಳುತ್ತಿದ್ದರು. ‘ಸಿಎಂ ಆಗಲು ಶಾಸಕರ ಬೆಂಬಲ ಬೇಕಾಗಿಲ್ಲ, ಹೈಕಮಾಂಡ್ ಬೆಂಬಲ ಇದ್ದರೆ ಸಾಕು’ ಎಂದು ಈ ಹಿಂದೆ ಡಿಕೆಶಿ ಹೇಳಿದ್ದ ಮಾತು ಈಗ ಮತ್ತೊಮ್ಮೆ ನೆನಪಿಗೆ ಬಂದಿದೆ. ಆ ಸಮಯದಲ್ಲಿ ಅವರು ಸ್ಪಷ್ಟವಾಗಿ, ತಮ್ಮ ಮೇಲೆ ಶಾಸಕರಿಗಿಂತಲೂ ಪಕ್ಷದ ಹೈಕಮಾಂಡ್ ನ ವಿಶ್ವಾಸ ಮುಖ್ಯ ಎಂದು ಹೇಳಿದ್ದರು.

ಹೈಕಮಾಂಡ್ ಕೃಪಾ ಕಟಾಕ್ಷದಿಂದ ಡಿಕೆಶಿ ಮುಖ್ಯಮಂತ್ರಿ! ಈಗ ಅದೇ ಹೈಕಮಾಂಡ್ ಕೃಪಾ ಕಟಾಕ್ಷದಿಂದ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಹರಿದಾಡುತ್ತಿದೆ. ‘ಹೈಕಮಾಂಡ್ ಅನುಮತಿ ಇದ್ದರೆ ಸಾಕು’ ಎಂದು ಹೇಳಿದ್ದ ಡಿಕೆಶಿಯ ಮಾತೇ ಈಗ ಅವರ ಸಿಎಂ ಪಟ್ಟದ ಮಾರ್ಗ ಸುಗಮ ಮಾಡಿತೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಅವರ ಆಪ್ತರು, ಬೆಂಬಲಿಗರ ವಲಯದಲ್ಲಿ ಈ ಸುದ್ದಿಯಿಂದ ದೊಡ್ಡ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸಿಎಂ ಕಾವೇರಿ ನಿವಾಸದಲ್ಲಿ ಮೌನ ಅತ್ತ ಸದ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ‘ಕಾವೇರಿ ನಿವಾಸ’ದಲ್ಲಿ ಸದಾ ರಾಜಕೀಯ ಚಟುವಟಿಕೆ ಗಟ್ಟಿಯಾಗಿ ನಡೆಯುತ್ತಿತ್ತು. ಆದರೆ ಇಂದು ಖಾಲಿ ಖಾಲಿಯಾಗಿದೆ. ನಿನ್ನೆ ತಡ ರಾತ್ರಿ ವರೆಗೂ ಸಿದ್ದರಾಮಯ್ಯ ಅವರ ಜೊತೆ ಇದ್ದ ಆಪ್ತ ಶಾಸಕರು, ಸಚಿವರು ಇಂದು ಮನೆ ಕಡೆಗೆ ಸುಳಿಯದೇ ಶಾಂತವಾಗಿದ್ದಾರೆ. ಅವರಿಗೆ ಸಿದ್ದರಾಮಯ್ಯ ಸ್ವತಃ ‘ಹೈಕಮಾಂಡ್ ಮಾಹಿತಿ ನೀಡಿ, ನೀವು ಯಾರು ಏನು ಮಾತಾಡಬಾರದು’ ಎಂದು ಹೇಳಿರುವ ಮಾಹಿತಿ ಹೊರಬಂದಿದೆ.


News18 Kannada 56 minutes ago
Home Flash News